ಚಿತ್ರದುರ್ಗ: ಮದ್ಯ ಸೇವನೆಗೆ ಹಣ ಕೊಡದ ಕಾರಣ ಕೋಪಗೊಂಡು ಹೆತ್ತ ತಾಯಿಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಮೊಳಕಾಲ್ಮುರು ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ.
58 ವರ್ಷದ ಅಂಜಿನಮ್ಮ ಮೃತಪಟ್ಟವರು. 37 ವರ್ಷದ ಶಿವಾರೆಡ್ಡಿ ತಾಯಿ ಕೊಲೆಗೈದ ಪುತ್ರನಾಗಿದ್ದಾನೆ. ಪತ್ನಿಯಿಂದ ದೂರವಾಗಿದ್ದ ಶಿವಾ ರೆಡ್ಡಿ ಕುಡಿತದ ಚಟ ಬೆಳೆಸಿಕೊಂಡಿದ್ದ.
ಪ್ರತಿದಿನ ಹಣಕ್ಕಾಗಿ ತಾಯಿಯನ್ನು ಪೀಡಿಸಿ ಜಗಳವಾಡುತ್ತಿದ್ದ. ಶನಿವಾರ ರಾತ್ರಿ ಕುಡಿಯಲು ಹಣ ಕೇಳಿದ್ದು, ಹಣ ಕೊಡಲು ಆಂಜಿನಮ್ಮ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆಂಜಿನಮ್ಮ ಸಾವನ್ನಪ್ಪಿದ್ದಾರೆ. ರಾಂಪುರ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.