ವಿಜಯಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿ, ಗಾಯಗೊಂಡಿದ್ದ ವ್ಯಕ್ತಿಯ ಹಣ ಹಿಂದಿರುಗಿಸಿದ 108 ಆಂಬುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಶೇಖ್ ಅಹಮ್ಮದ ಎಂದು ಗುರುತಿಸಲಾಗಿದೆ. ಇನ್ನು 108 ಆಂಬುಲೆನ್ಸ್ ಸಿಬ್ಬಂದಿಯಾದ ಸಚಿನ ಹಾಗೂ ನಿಂಗಪ್ಪ, ಕೂಡಲೇ ಸ್ಥಳಕ್ಕೆ ಧಾವಿಸಿದ ಪ್ರತಮ ಚಿಕತ್ಸೆ ನೀಡಿ, ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿದ್ದ ಶೇಖ್ ಅಹಮ್ಮದ್ ಅವರ ಹಣ, ವಸ್ತುಗಳನ್ನು ಪ್ರಾಮಾಣಿಕವಾಗಿ ಮರಳಿ ಅವರಿಗೆ ನೀಡಿದ್ದಾರೆ.