ವಿಜಯಪುರ : ನಗರದ ಉದ್ಯಮಿಯೊಬ್ಬರಿಗೆ ಯಾರೋ ಅನಾಮಧೇಯರು ಆನ್ಲೈನ್ ಮೂಲಕ ಮೋಸ ಮಾಡುವ ದುರುದ್ದೇಶದಿಂದ ಕ್ರಿಪ್ಟೋ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದರೇ, ಹೂಡಿದ ಹಣದ ಜೊತೆಗೆ ಪ್ರತಿಶತ 200% ಲಾಭಾಂಶ ಕೋಡುತ್ತೇವೆ ಅಂತಾ ನಂಬಿಸಿ, ವಿವಿಧ ರೀತಿಯ ಸುಳ್ಳು ಸಬೂಬುಗಳನ್ನು ಹೇಳಿ ದೂರುದಾರರ ಕಡೆಯಿಂದ ಆರೋಪಿತರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು-59,12,765/- ರೂಪಾಯಿ ಹಣ ಹಾಕಿಸಿಕೊಂಡು ಮೊಸಮಾಡಿರುವ ಬಗ್ಗೆ ವಿಜಯಪುರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಈ ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ ರವರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ರಮೇಶ ಅವಜಿ ಪೊಲೀಸ್ ಇನ್ಸ್ಪೆಕ್ಟರ್, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಪಿಎಸ್ಐ ಮಲ್ಲಿಕಾರ್ಜುನ ತಳವಾರ, ಹಾಗೂ
ಸಿಬ್ಬಂದಿ ಜನರನ್ನು ಒಳಗೊಂಡ ತನಿಖಾ ತಂಡವನ್ನು ರಚನೆ ಮಾಡಿದ್ದು, ಸದರಿ ತನಿಖಾ ತಂಡವು ಆರೋಪಿತರ ತಪಾಸಣೆ ಕುರಿತು `ಟೆಕ್ನಿಕಲ್, ಎವಿಡೆನ್ಸ್ಗಳಾದ ಮೊಬೈಲ್ ಸಿಡಿಆರ್, ಲೊಕೇಶನ್, ಹಾಗೂ ಮೊಬೈಲ್ ಸಿಮ್ ಸಬ್ ಸ್ಕ್ರೈಬರ್ ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿ ಆಧರಿಸಿ ಈ ಪ್ರಕರಣದಲ್ಲಿ ಈ ಮೊದಲು ದಿನಾಂಕ: 06/10/2023 ರಂದು ಕೀನ್ಯಾ ದೇಶದ ಪ್ರಜೇ ಸೇರಿ ಒಟ್ಟು 05 ಜನ ಆರೋಪಿತರಿಗೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅಲ್ಲದೇ ಪ್ರಕರಣದ ತನಿಖೆ ಮುಂದುವರೆಸಿ. ಪ್ರಕರಣದಲ್ಲಿ ಭಾಗಿಯಾದ ಇನ್ನೂಳಿದ ಆಫ್ರಿಕಾ ಖಂಡದ ನೈಜಿರಿಯಾ ದೇಶದ 03 ಜನ ಆಪಾದಿತರಾದ
1) Osemudiamen @ Peter S/o Idemudian, Age-38 Yers, Permanent Address: Ekpoma, Edo State, Country: Nigeria, Present Address: CK Palya, Tq-Anekal, Bengaluru Rural District, Karnataka-560083.
2) Emeka @ Happy S/o Nwaolisa, Age-40 Years, Permanent Address: Nnewi, Otolo City, Anambra State, Country: Nigeria, Present Address: TC Palya, K.R. Puram, Bengaluru, Karnataka-560049.
3) Obinna Stanley S/o lhekwerene, Age-42 Years, Permanent Address: Amurie Nkoro, FCT Abuja, Abia State, Country: Nigeria, Present Address: Neelasandra, Near Bazaar Street, Bengaluru, Karnataka-560047.
ಇವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಗೆ ತಂದು ವಿಚಾರಣೆ
ಕೈಕೊಂಡು ಸದರಿ ಆಪಾದಿತರ ಕಡೆಯಿಂದ ಪ್ರಕರಣದಲ್ಲಿ ಕೃತ್ಯಕ್ಕೆ ಬಳಿಸಿದ ವಿವಿಧ ಕಂಪನಿಯ 21 ಮೊಬೈಲ್ಗಳು,
18 ಸಿಮ್ ಕಾರ್ಡಗಳು, 01 ಲ್ಯಾಪ್ಟಾಪ್, 02 ಪೆನಡ್ರೈವಗಳು, 01 ಡೊಂಗಲ್, 12 ಎಟಿಎಂ ಕಾರ್ಡಗಳನ್ನು ವಶಪಡಿಸಿಕೊಂಡು ಆಪಾದಿತರ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಿಸಿ, ಆಪಾದಿತರನ್ನು ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಿದ್ದು, ಇರುತ್ತದೆ. ಅಲ್ಲದೇ ಪ್ರಕರಣಲ್ಲಿ ಫರಾರಿ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಈ ಪ್ರಕರಣದ ಪತ್ತೆ: ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.