ಆರು ಮಂದಿ ನಕ್ಸಲೈಟ್ಗಳು ಸಿಎಂ ಗೃಹಕಚೇರಿಯಲ್ಲೇ ಶರಣಾಗುವುದಾಗಿ ತಿಳಿದುಬಂದಿದೆ. ಇದಕ್ಕೂ ಮುನ್ನ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗುವುದಾಗಿ ನಕ್ಸಲರು ಮಾಹಿತಿ ನೀಡಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ತಮ್ಮ ಶರಣಾಗತಿ ಪ್ಲಾನ್ ಅನ್ನು ಬದಲಾಯಿಸಿಕೊಂಡಿರುವ ನಕ್ಸಲ್ಗಳು ಬೆಂಗಳೂರಿನಲ್ಲಿ ಸಿಎಂ ಗೃಹ ಕಚೇರಿಯಲ್ಲೇ ಶರಣಾಗುವುದಾಗಿ ತಿಳಿಸಿದ್ದಾರೆ. ಲತಾ, ಕಳಸದ ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಮಾರಪ್ಪ ಅರೋಳಿ, ತಮಿಳುನಾಡಿನ ವಸಂತ ಹಾಗೂ ಕೇರಳದ ಜಿಶಾ ಶರಣಾಗುತ್ತಿದ್ದಾರೆ.