ವಿಜಯಪುರದ #BLDE ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಘದ -#KSOGA 33ನೇ ಸಮ್ಮೇಳನವನ್ನು ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ್.
ರಾಜ್ಯದ ನಾನಾ ಭಾಗಗಳಿಂದ 1,100ಕ್ಕೂ ಹೆಚ್ಚು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಆಗಮಿಸಿದ್ದು, 350ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮಂಡನೆಯಾಗಲಿವೆ. 3 ದಿನಗಳ ಕಾಲ ಸಮ್ಮೇಳನವು ನಡೆಯಲಿದೆ.
ಇದೇ ವೇಳೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್.
“ಪ್ರಕೃತಿ ಮಾತೆಯಂತೆ ಮಹಿಳೆಯರು ಈ ಜಗತ್ತಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಹಿಳೆ ಮಾತ್ರವೇ ಮತ್ತೊಂದು ಜೀವವನ್ನು ಸೃಷ್ಟಿಸುವ ಶಕ್ತಿ ಹೊಂದಿದ್ದಾಳೆ. ನಾವು ಸ್ತ್ರೀರೋಗ, ಮರಣದ ಪ್ರಮಾಣಗಳನ್ನು ಕಡಿಮೆ ಮಾಡುವತ್ತ ಗಮನ ಹರಿಸಬೇಕು. ಆರೋಗ್ಯವಂತ ಮಹಿಳೆಯಿಂದ ಮಾತ್ರ ಸಂತಸದ ಕುಟುಂಬ ಮತ್ತು ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ.”
ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮೀಜಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ವಹಿಸಿದ್ದರು. KSOGA ಅಧ್ಯಕ್ಷೆ ಡಾ. ವಿದ್ಯಾ ಥೊಬ್ಬಿ, ಪದಾಧಿಕಾರಿಗಳಾದ ಡಾ. ಎಂ. ಜಿ. ಹಿರೇಮಠ, ಡಾ. ಎಚ್. ನಾಗರಾಜ ಹಾಗೂ BLDE DU ಸಮಕುಲಾಧಿಪತಿಗಳಾದ ಡಾ. ವೈ.ಎಂ. ಜಯರಾಜ್, ಉಪಕುಲಪತಿಯವರಾದ ಡಾ. R.S. ಮುಧೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.