ಬೆಂಗಳೂರು ನನ್ನ ನಾಯಕತ್ವದ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದರೆ ನನ್ನ ಬಗ್ಗೆ ಮಾತನಾಡಲಿ. ಆದರೆ ನಮ ತಂದೆಯವರಾದ ಯಡಿಯೂರಪ್ಪನವರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವುದು ಇಲ್ಲವೇ ಕೀಳು ಪದ ಪ್ರಯೋಗ ಮಾಡಿದರೆ ಸುಮನಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಿನ್ನಮತಿಯರಿಗೆ ನೇರ ಮಾತುಗಳಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಇತ್ತೀಚೆಗೆ ಕೆಲವರು ಯಡಿಯೂರಪ್ಪನವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಯಡಿಯೂರಪ್ಪನವರು. ನನ್ನ ಬಗ್ಗೆ ಅಸಮಾಧಾನ ವಿದ್ದರೇ ಮಾತನಾಡಿ, ಆದರೆ ತಂದೆಯವರ ಬಗ್ಗೆ ಮಾತನಾಡಿದರೆ ಸುಮನಿರುವುದಿಲ್ಲ.ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷನಾಗಿಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದೇನೆ.
ಹಾಗಂತ ಮೌನ ವಹಿಸಿದ್ದೇನೆ ಎಂದರೆ ಅದು ನನ್ನ ದೌರ್ಭಾಗ್ಯವಲ್ಲ. ನನಗೂ ಸ್ವಾಭಿಮಾನವಿದೆ. ಸೂಕ್ತ ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದು ಅಸಮಾಧಾನ ಹೊರ ಹಾಕಿದರು.

