ವಿಜಯಪುರ ನಗರದ ಅಂಬೇಡ್ಕರ ವೃತ್ತದ ಬಳಿ ಇಂದು.
ಭೀಮ್ ಆರ್ಮಿ ವತಿಯಿಂದ ನಟ ಉಪೇಂದ್ರ ಹೇಳಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಒಂದರಲ್ಲಿ ನಟ ಉಪೇಂದ್ರ ಮಾತನಾಡುವಾಗ ದಲಿತ ಸಮುದಾಯಕ್ಕೆ ದಕ್ಕೆ ಬರುವಂತ ಹೇಳಿಕೆ ನೀಡಿದ್ದಾರೆಂದು ಎಲ್ಲೆಡೆ ಸುದ್ದಿಗಳು ಹರದಾಡುತ್ತಿವೆ.
ನಟ ಉಪೇಂದ್ರ ನನ್ನ ಬಂದಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿವಿಧ ದಲಿತ ಸಂಘಟನೆಗಳಿಂದ ರಾಜ್ಯದಲ್ಲಿ ಹಲವೆಡೆ ಪ್ರತಿಭಟನೆಗಳು ನಡೆದಿವೆ.
ಅದೇ ರೀತಿ ಭೀಮ್ ಆರ್ಮಿ ಸಂಘಟನೆ ಕೂಡ ವಿಜಯಪುರ ನಗರದಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಂಡಿತ್ತು.
ಈ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಮತೀನ್ ಕುಮಾರ್, ಜಿಲ್ಲಾ ಪದಾಧಿಕಾರಿಗಳು, ಸದಸ್ಯರು, ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು..