ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ತಾಯಿ-ಮಗ(Mother & Son) ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಪಡಗಾನೂರ ಕ್ರಾಸ್ ಬಳಿ ಇರುವ ದಾವಲ್ ಸಾಬ್ ಇಟ್ಟಂಗಿ ಬಟ್ಟಿ ಹತ್ತಿರ ನಡೆದಿದೆ. ದೇವರಹಿಪ್ಪರಗಿ ಪಟ್ಟಣದ ನಿವಾಸಿಗಳಾದ ಅಂಬರೀಶ ಮಲ್ಕಣ್ಣ ಆರಿಗೇರಿ (25), ಇಂದಿರಾಬಾಯಿ ಮಲ್ಕಣ್ಣ ಆರಿಗೇರಿ (53) ಮೃತಪಟ್ಟಿರುವ(Deaths) ದುರ್ದೈವಿಗಳು. ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಉಳಿದಂತೆ ಕಾರಿನಲ್ಲಿದ್ದ ಅಜ್ಜಿ ಹಾಗೂ ಮೊಮ್ಮಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ವಿಜಯಪುರಕ್ಕೆ ಅಜ್ಜಿಯ ಕಣ್ಣು ತೋರಿಸಲು ತೆರಳುವಾಗ ಈ ಘಟನೆ ಸಂಭವಿಸಿದೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.