ಶಿವಮೊಗ್ಗ: ಗೆಳೆಯನ ಸಾವಿನ ವಿಷಯ ತಿಳಿದ ನಂತರ ಹೃದಯಘಾತದಿಂದ ಪ್ರಾಣ ಸ್ನೇಹಿತ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಆನಂದ್ (30) ಎಂಬ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ.
ಆನಂದ್ ಸಾವಿನ ವಿಷಯ ತಿಳಿಯುತ್ತಿದ್ದಂತೆ 22 ವರ್ಷದ ಸಾಗರ್ ಎಂಬ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಶಿಕಾರಿಪುರಕ್ಕೆ ತೆರಳುತ್ತಿದ್ದ ಆನಂದ್ ಬೈಕ್ ಹಾಗೂ ಮತ್ತೊಂದು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಆನಂದ್ ಅಪಘಾತದ ಸ್ಥಳದಲ್ಲೇ ಸಾವನ್ನಪ್ಪಿದ್ದ. ಅದೇ ಊರಿನ ಜೀವದ ಗೆಳೆಯ ಸಾಗರ್ಗೆ ವಿಷಯ ತಿಳಿಸಲಾಗಿತ್ತು, ವಿಷಯ ಕೇಳುತ್ತಿದ್ದಂತೆ ಹೃದಯಘಾತದಿಂದ ಸಾಗರ್ ಕೂಡ ಕೊನೆಯುಸಿರೆಳೆದಿದ್ದಾನೆ.