ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಾದ ಮಹಿಳೆಯರಿಗೆ ನೀಡುವ ಮಾಸಿಕ 2 ಸಾವಿರ ರೂ. ನೀಡಲಾಗುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಕ್ಕೆ ಕ್ಯೂಆರ್ ಕೋಡ್ ಇರುವ ಸ್ಮಾರ್ಟ್ ಕಾರ್ಡ್ ಅನ್ನು ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ದಿವಂಗತ ರಾಜೀವ್ ಗಾಂಧಿ ಹಾಗೂ ದಿವಂಗತ ದೇವರಾಜ್ ಅರಸು ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಲಾಬಿ ವರ್ಣದ ಸ್ಮಾರ್ಟ್ ಕಾರ್ಡ್ ಅನ್ನು ಪ್ರದರ್ಶಿಸಿದ ಅವರು, ಈ ಸ್ಮಾರ್ಟ್ ಕಾರ್ಡ್ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ಭಾವಚಿತ್ರ ಇರಲಿದೆ ಅದೇ ರೀತಿಯಾಗಿ ಹಿಂಭಾಗದಲ್ಲಿ ಮಹಿಳೆಯ ಭಾವಚಿತ್ರ ಹಾಗೂ ಕ್ಯೂಆರ್ ಕೊಡ್ ಇರಲಿದೆ. ಸ್ಕ್ಯಾನ್ ಮಾಡಿದಾಗ ಮಹಿಳೆಯರಿಗೆ ಯಾವಾಗ 2000 ರೂಪಾಯಿ ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ಲಭ್ಯವಾಗಲಿದೆ ಎಂದು ವಿವರಿಸಿದರು.
‘ಶಕ್ತಿ’ ಯೋಜನೆಗೂ ಸ್ಮಾರ್ಟ್ ಕಾರ್ಡ್..
ಅದೇ ರೀತಿಯಾಗಿ ಶಕ್ತಿಯೋಜನೆಗಳು ಸ್ಮಾರ್ಟ್ ಕಾರ್ಡ್ ಅನ್ನು ಮಾಡಲಾಗುತ್ತಿದೆ.ಮಹಿಳೆಯರು ಬಸ್ ನಲ್ಲಿ ಹತ್ತುವಾಗ ಇದನ್ನು ಸ್ಟೈಪ್ ಮಾಡಿ ಹತ್ತಬೇಕಾಗುತ್ತದೆ. ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಲು ಇದು ಸಹಕಾರಿಯಾಗಲಿದೆ. ಅಲ್ಲದೆ ಸುಳ್ಳು ಮಾಹಿತಿ ರವಾನೆ ಆಗುವುದಕ್ಕೂ ತಡೆ ಬೀಳಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.