ವಿಜಯಪುರ : ಬೈಕ್ ಸವಾರರ ಮೇಲೆ ಟ್ಯಾಂಕರ್ ಟ್ರಕ್ ಹರಿದು ಇಬ್ಬರು ಬೈಕ್ ಸವಾರರ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಎನ್ಪಿಲ್ಡ್ ಶೋರೂಂ ಬಳಿ ನಡೆದಿದೆ. ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಬೈಕ್ ಸವಾರರ ತಲೆ ಮೇಲೆ ಕ್ಯಾಂಟರ್ ಹರಿದು ಹೋಗಿದೆ.
ತಲೆಯಿಂದ ಮೆದಳು ಛಿದ್ರ ಛಿದ್ರವಾಗಿದೆ. ಕ್ಯಾಂಟರ್ ಓವರ್ ಟೆಕ್ ಮಾಡಲು ಹೋಗಿ ಚಕ್ರಗಳ ಅಡಿಯಲ್ಲಿ ಸಿಲುಕಿ ಬೈಕ್ ಸವಾರರು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವವರ ಹೆಸರು ಹಾಗೂ ಮಾಹಿತಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.