ಬೆಂಗಳೂರು: ನಗರದಲ್ಲಿ ಬೀಡು ಬಿಟ್ಟಿದ್ದಂತ ಲಂಕಾದ ಮೂವರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಶ್ರೀಲಂಕಾದ ಕಾಸಿನ್ ಕುಮಾರ್, ಅಮಿಲ ನುವಾನ್, ರಂಗ ಪ್ರಸಾದ್ ಎಂಬುದಾಗಿ ತಿಳಿದು ಬಂದಿದೆ.
ಈ ಮೂವರು ಶ್ರೀಲಂಕಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು ಆಗಿದ್ದರು ಎಂಬುದಾಗಿ ತಿಳಿದು ಬಂದಿದೆ. ಇನ್ನೂ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು ಮೂವರು ಆಗಿದ್ದರೂ ಅವರಿಗೆ ಆಶ್ರಯವನ್ನು ನೀಡಿದಂತ ಜೈ ಪರಮೇಶ್ | ಆಲಿಯಾಸ್ ಜಾಕ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಯಲಹಂಕದ ಬಳಿಯ ವಿಶ್ವ ಪ್ರಕೃತಿ ಅಪಾರ್ಮೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಶ್ರೀಲಂಕಾದ ಮೂವರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳನ್ನು ಬಂಧಿಸಿದ್ದಾರೆ.
ಅಂದಹಾಗೇ ಮೋಟ್ ವಾಂಟೆಡ್ ಕ್ರಿಮಿನಲ್ ಕಾಸಿನ್ ಕುಮಾರ್ ವಿರುದ್ಧ ನಾಲ್ಕು ಕೊಲೆ ಕೇಸ್ ಗಳಿದ್ದಾವೆ. ಅಮಿಲ ನುವಾನ್ ವಿರುದ್ಧ ಐದು ಕೊಲೆ ಪ್ರಕರಮ, ರಂಗ ಪ್ರಸಾದ್ ವಿರುದ್ಧ ಹಲ್ಲೆ ಕೊಲೆ ಪ್ರಕರಣಗಳು ದಾಖಲಾಗಿರೋದಾಗಿ ತಿಳಿದು ಬಂದಿದೆ.
ಬಂಧಿತ ನಾಲ್ವರು ಆರೋಪಿಗಳಿಂದ 13 ಮೊಬೈಲ್, ಶ್ರೀಲಂಕಾದ ವಿವಿಧ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟಿಂಗ್ಸ್, ಮನೆ ಬಾಡಿಗೆ ಕರಾರು ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.