ವಿಜಯಪುರ : ವ್ಯಕ್ತಿ ಕಾಣೆಯಾಗಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿರುವ ಘಟನೆ ಬಸವನಾಡಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಗಂಡನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ಪಟ್ಟಣದಲ್ಲಿ ನಡೆದಿದೆ.
ಜಕರಾಯ್ ದಳವಾಯಿ ಹತ್ಯೆಯಾಗಿರುವ ದುರ್ದೈವಿ. ಇನ್ನು ಇತನ ಹೆಂಡತಿ ಜಯಶ್ರೀ ದಳವಾಯಿ, ಡೋಂಗ್ರಿಸಾಬ್ ಬೊಮ್ಮನಳ್ಳಿ ಬಂಧಿತ ಆರೋಪಿಗಳು. ಇನ್ನು ಜಕರಾಯನ್ನು ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದು, ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವವನ್ನು ಅರ್ಧ ಮರ್ಧ ಸುಟ್ಟು ಪರಾರಿಯಾಗಿದ್ದಾರೆ. ತದನಂತರ ಮನೆಯಲ್ಲಿ ತಂದೆ ಬೇಕು ಎಂದು ಮಕ್ಕಳು ತಾಯಿಗೆ ಕಿರಿಕಿರಿ ಮಾಡಿದ್ದಾರೆ. ಅದಕ್ಕಾಗಿ ಊರಿನ ಹಿರಿಯ ಜಯಶ್ರೀಯನ್ನು ಸಮಾಧಾನ ಪಡಿಸಿ, ಕೇಳಿದ್ದಾರೆ. ಈ ವೇಳೆ ತಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಗಂಡನ ಹತ್ಯೆಗೈದಿರುವ ಕುರಿತು ಎಲ್ಲವನ್ನೂ ಹೇಳಿದ್ದಾಳೆ. ಅದಕ್ಕಾಗಿ ಪೊಲೀಸರು ಬಂಧಿಸಿ ಸೂಕ್ತ ತನಿಖೆ ನಡೆಸಿ, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.