ಭಾರತ : ಇಸ್ರೋ ಚಂದ್ರನ ಬಗ್ಗೆ ಇಂದು ಮಹತ್ವದ ಮಾಹಿತಿ ನೀಡಿದೆ. ಇಷ್ಟುದಿನ ಭಾರಿ ಕುತೂಹಲ ಕೆರಳಿಸಿದ್ದ ಚಂದ್ರನ ದಕ್ಷಿಣ ಧ್ರುವದ ಸಂಪೂರ್ಣ ಚಿತ್ರಣ ಹೊರಬಿದ್ದಿದೆ. ಈ ಮೂಲಕ ಮನುಷ್ಯ ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸ ಮಾಡಲು ಬೇಕಾದ ಅಂಶಗಳು ಕೂಡ ಪತ್ತೆಯಾಗಿವೆ. ಹಾಗಾದರೆ ಚಂದ್ರನ ಮೇಲೆ ಏನೆಲ್ಲಾ ಇದೆ?
ಭೂಮಿಯಂತೆ ಅಲ್ಲೂ ವಾತಾವರಣ ಇದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
‘ಚಂದ್ರಯಾನ-3’ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಸಿದ್ದು, ಪ್ರಗ್ಯಾನ್ ರೋವರ್ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಿದೆ. ವಿಕ್ರಮ್ ಲ್ಯಾಂಡರ್ & ಪ್ರಗ್ಯಾನ್ ರೋವರ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಹೀಗೆ ಪ್ರಗ್ಯಾನ್ ರೋವರ್ ತನ್ನ ಸೂಕ್ಷ್ಮ ಅಧ್ಯಯನದಲ್ಲಿ ಮಹತ್ವದ ಮಾಹಿತಿಯನ್ನ ನೀಡಿದೆ. ಈ ಹಿಂದೆ ಕೂಡ ಭಾರತ ಚಂದ್ರನ ಮೇಲೆ ಏನೆಲ್ಲಾ ಇದೆ ಎಂಬುದನ್ನು ತಿಳಿಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ನುಗ್ಗಿ ಚಂದ್ರನ ನೆಲ ಬಗೆದು ಅಧ್ಯಯನ ನಡೆಸಿದೆ. ಈ ಮೂಲಕ ಮನುಷ್ಯರ ಭವಿಷ್ಯಕ್ಕೆ ಭಾರತ ಹಾಗೂ ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆ ಮುನ್ನುಡಿ ಬರೆಯುತ್ತಿದೆ.
- ಚಂದ್ರನ ಮೇಲೆ ‘ಆಕ್ಸಿಜನ್’ ಹುಡುಕಿದ ಭಾರತ!
ಅಂದಹಾಗೆ ಈಗ ಪ್ರಗ್ಯಾನ್ ರೋವರ್ ನೀಡಿರುವ ಮಾಹಿತಿ ಪ್ರಕಾರ, ಚಂದ್ರನ ದಕ್ಷಿಣದಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಟೈಟಾನಿಯಂ (Ti) ಇದೆ ಎಂದು ಇಸ್ರೋ ಸಂಸ್ಥೆಯ ರೋವರ್ ತಿಳಿಸಿದೆ. ಇದಲ್ಲದೆ ಮ್ಯಾಂಗನೀಸ್ (Mn), ಸಿಲಿಕಾನ್ (Si), ಆಮ್ಲಜನಕ (O) ಕೂಡ ಇರುವುದು ಗೊತ್ತಾಗಿದೆ. ಈ ಅಧ್ಯಯನ ಮನುಷ್ಯನ ಭವಿಷ್ಯ ರೂಪಿಸುವಲ್ಲಿ ಮಹತ್ವದ ಜವಬ್ದಾರಿ ವಹಿಸುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಹಾಗೇ ಹೈಡ್ರೋಜನ್ ಧಾತು ಹುಡುಕಲು ಇಸ್ರೋ ರೋವರ್ಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ರೋವರ್ ಅಧ್ಯಯನ ನಡೆಸಿದ್ದು ಹೇಗೆ?
ಪ್ರಗ್ಯಾನ್ ರೋವರ್ ತನ್ನಲ್ಲಿ ಅತ್ಯಾಧುನಿಕ ಉಪಕರಣ ಹೊಂದಿದ್ದು, ಲೇಸರ್-ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್(LIBS) ಉಪಕರಣ ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (S) ಇರುವಿಕೆ ದೃಢಪಡಿಸಿದೆ ಎಂದು ಇಸ್ರೋ ತಿಳಿಸಿದೆ. ಇದರ ಜತೆ ಯಾವ ಯಾವ ಅದಿರು ಹಾಗೂ ಧಾತು ಚಂದ್ರನ ಮೇಲೆ ಇವೆ ಎಂಬುದನ್ನ ಕೂಡ ಇಸ್ರೋ ತಿಳಿಸಿದೆ. ಹೀಗೆ ಇಸ್ರೋ ಸಂಸ್ಥೆಯ ಅಧ್ಯಯನವು ದೊಡ್ಡ ಸಾಧನೆ ಮಾಡಿದೆ. ಚಂದ್ರನ ಈ ಭಾಗದ ಮೇಲೆ ಲ್ಯಾಂಡರ್ ಇಳಿಸುವುದೇ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತವು ಯಶಸ್ವಿಯಾಗಿ ಲ್ಯಾಂಡರ್ ಮತ್ತು ರೋವರ್ ಇಳಿಸಿ ಪ್ರಮುಖ ಅಧ್ಯಯನ ಕೈಗೊಂಡಿದೆ.