ಕಲಬುರ್ಗಿ: ಅನುಮತಿ ಪಡೆಯದೆ ಬ್ಯಾನರ್ ಅಳವಡಿಕೆ: ಬೆಂಬಲಿಗರು ಮಾಡಿದ ತಪ್ಪಿಗೆ ಸಚಿವ ಪ್ರಿಯಾಂಕ್ ಖರ್ಗೆಗೆ ದಂಡ ಅನುಮತಿ ಪಡೆಯದೆ ಬೆಂಬಲಿಗರು ಹಾಕಿದ್ದ ಬ್ಯಾನರ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ಹಿನ್ನೆಲೆ ಪ್ರಿಯಾಂಕ್ ಖರ್ಗೆ ಭಾವಚಿತ್ರವಿರುವ ಬ್ಯಾನರ್ ಅನ್ನು ಬೆಂಬಲಿಗರು ಹಾಕಿದ್ದರು. ಬ್ಯಾನರ್ ಹಾಕಿದವರ ಹೆಸರಿಲ್ಲದಿದ್ದರಿಂದ ಸಚಿವರಿಗೆ ಪಾಲಿಕೆ ದಂಡವಿಧಿಸಿದೆ.
ಕಲಬುರಗಿ, ಆಗಸ್ಟ್ 30: ಅನುಮತಿ ಪಡೆಯದೆ ಬೆಂಬಲಿಗರು ಹಾಕಿದ್ದ ಬ್ಯಾನರ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಗಮಿಸಿದ್ದಾಗ ಘಟನೆ ನಡೆದಿದೆ. ನಗರದ ಆಳಂದ ಚೆಕ್ಪೋಸ್ಟ್ ಬಳಿ ಪ್ರಿಯಾಂಕ್ ಖರ್ಗೆ ಭಾವಚಿತ್ರವಿರುವ ಬ್ಯಾನರ್ ಅನ್ನು ಬೆಂಬಲಿಗರು ಹಾಕಿದ್ದರು. ಬ್ಯಾನರ್ ಹಾಕಿದವರ ಹೆಸರಿಲ್ಲದಿದ್ದರಿಂದ ಸಚಿವರಿಗೆ ಪಾಲಿಕೆ ದಂಡವಿಧಿಸಿದೆ.
ಸದ್ಯ 5 ಸಾವಿರ ರೂ. ದಂಡ ಪಾವತಿಸಲು ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದು, ತಮ್ಮ ಸಿಬ್ಬಂದಿಗೆ ದಂಡದ ಹಣ ಪಾವತಿಸಲು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅನುಮತಿ ಪಡೆಯದೆ ಬ್ಯಾನರ್ ಹಾಕುವವರ ವಿರುದ್ಧ ಕ್ರಮಗೊಳ್ಳುವಂತೆ ಕೆಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಸೂಚನೆ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ನಾನು ಮಲ್ಲಿಕಾರ್ಜುನ ಅಲ್ಲಾ, ಅವರಂತೆ ಆಗ ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ ತಂದೆ ನೋಡಿ ಕಲಿಯಲಿ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾನು ಮಲ್ಲಿಕಾರ್ಜುನ ಅಲ್ಲಾ, ಅವರಂತೆ ಆಗ ಆಗಲು ಸಾಧ್ಯವಿಲ್ಲಾ. ನಾನು ಸಂವಿಧಾನದಂತೆ ಮಾತನಾಡಿದರೆ ದರ್ಪದ ಮಾತು ಅಂತ ಹೇಳುತ್ತಾರೆ. ಕಾನೂನು ವಿರುದ್ಧ ನಡೆದುಕೊಳ್ಳುವವರಿಗೆ ಮೆರವಣಿಗೆ ಮಾಡಲು ಆಗಲ್ಲಾ. ಹೀಗಾಗಿ ಅವರನ್ನು ಒದ್ದು ಒಳಗೆ ಹಾಕಿ ಅಂತ ಹೇಳಿದ್ದೇನೆ ಎಂದರು.