ಗದಗ: ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಮದುರ್ಗದಲ್ಲಿ ಹಣ ಇದ್ದ ವ್ಯಕ್ತಿಗೆ ಡಿಕೆಟ್ ಕೊಟ್ರು.. ಬಿಜೆಪಿಯಲ್ಲಿ ಮಿಸ್ ಮ್ಯಾನೇಜೆಂಟ್ ಇದೆ. ಬೈಂದೂರು ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಿದ್ರು. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಟಿಕೆಟ್ ಕೊಟ್ಟರು, ಸುಕುಮಾರ್ ಶೆಟ್ಟಿ ಆಕ್ರೋಶದಲ್ಲಿದ್ದಾರೆ. ಮಾಜಿ ಶಾಸಕರು, ಕಾರ್ಯಕರ್ತರಲ್ಲಿ ಕೋಭೆ ಉಂಟಾಗಿದೆ ಎಂದರು.
ಕಾಂಗ್ರೆಸ್ ಬರಬೇಕು ಅಂತಾ ಬಹಳಷ್ಟು ಜನ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ ಎಂದ ಜಗದೀಶ್ ಶೆಟ್ಟರ್, ಅಂತವರ ಹೆಸರು ಹೇಳಲ್ಲ, ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ನಿರ್ಧಾರ ಆದ್ಮಲೆ ಹೆಸರು ಹೇಳುತ್ತೇನೆ ಎಂದರು. ಇನ್ನು, ಬಿಸಿ ಪಾಟೀಲ್ ಅವರು ಸಂಪರ್ಕದಲ್ಲಿಲ್ಲ. ಸೇಡು ತೀರಿಸಿಕೊಳ್ಳುವುದಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಪ್ರೊಟೆಸ್ಟ್ ಮಾಡಿದ್ದೆ. ಅವರಾಗೇ ಬರುತ್ತಿದ್ದಾರೆ. ಸೆಳೆಯುವ ಪ್ರಶ್ನೆ ಇಲ್ಲ. ಎಲ್ಲವನ್ನೂ ಕಾದು ನೋಡಿ ಎಂದರು.
ಇನ್ನು ಪ್ರಹ್ಲಾದ್ ಜೋಶಿ ವಿರುದ್ಧ ಜಗದೀಶ್ ಶೆಟ್ಟರ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಎಂಪಿಗೆ ಯಾರು ನಿಲ್ಲಬೇಕು ಅನ್ನೋದನ್ನ ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರ ಮಾಡುತ್ತೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಸೌಲಭ್ಯಕ್ಕಾಗಿ, ಕೇಂದ್ರದ ಒಬಿಸಿಯಲ್ಲಿ ಲಿಂಗಾಯತರನ್ನ ಸೇರಿಸೋಕು ಅಂತಾ ಆಗ್ರಹಿಸ್ತಿದ್ದಾರೆ. ಲಿಂಗಾಯತರಿಗೆ ಅನ್ಯಾಯವಾಗಿದೆ ಅನ್ನೋ ಕೂಗಿದೆ. ಇದಕ್ಕೆ ಹೋರಾಟದ ರೂಪ ಸಿಗ್ತಿದೆ. ನಾನು ನೇತೃತ್ವ ವಹಿಸೋದಲ್ಲ.. ಜಗದ್ಗುರುಗಳು ನೇತೃತ್ವ ವಹಿಸಿದ್ದಾರೆ ಎಂದರು.
ಬಿಎಲ್ ಸಂತೋಷ್ ಆ ರೀತಿ ಹೇಳಿಕೆ ಕೊಟ್ಟಿಲ್ಲ ಎಂದು ರಾಮುಲು ಹೇಳಿದ್ದಾರೆ ಎಂದ ಶೆಟ್ಟರ್, ಈಗ ಸಂತೋಷ್ ಅವರೇ ಸ್ಪಷ್ಟಿಕರಣ ಕೊಡಬೇಕು. ಮೊದಲು ನಾಲ್ಕು ಜನರನ್ನ ಬಿಜೆಪಿಗೆ ಸೇರಿಸಿಕೊಳ್ಳಿ ಅಂತಾ ಪ್ರಿಯಾಂಕ್ ಖರ್ಗೆಯವರು ಸವಾಲು ಹಾಕಿದ್ದಾರಾ ಎಂದು ಬಿಎಲ್ ಸಂತೋಷ್ ಗೆ ತಿರುಗೇಟು ನೀಡಿದರು.
ಇನ್ನು ಚೀಟಿ ಎತ್ತುವ ಮೂಲಕವಾದ್ರೂ ತಾತ್ಕಾಲಿಕ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡಿ ಎಂದ ಜಗದೀಶ್ ಶೆಟ್ಟರ್, ಸರ್ಕಾರ ರಚಿಸಿ ನೂರು ದಿನವಾಯ್ತು. ಈಗೂ ವಿರೋಧ ಪಕ್ಷದ ನಾಯಕ ಆಯ್ಕೆಯಾಗಿಲ್ಲ. ಶೋಚನೀಯ ಪರಿಸ್ಥಿತಿಯಲ್ಲಿದೆ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು. ರಾಜ್ಯ ಬಿಜೆಪಿ ಕೆಲವರ ಮುಷ್ಟಿಯಲ್ಲಿದೆ.. ಹೀಗಾಗಿ ಸುಧಾರಣೆಯಾಗಿಲ್ಲ ಎಂದರು.
ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಐದಾರು ವರ್ಷದಿಂದ ಚರ್ಚೆಯಲ್ಲಿದೆ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ.. ಈಗ ಕಮಿಟಿ ಮಾಡಿದ್ದಾರೆ ಎಂದ ಶೆಟ್ಟರ್, ಯಾವ ಹಿನ್ನೆಯಲ್ಲಿ ಕಮಿಟಿ ರಚಿಸಿದ್ದಾರೆ ಅನ್ನೋದು ಗೊತ್ತಿಲ್ಲ. ರಾಜಕೀಯ ಅನುಭದಲ್ಲಿ ಹೇಳೋದಾದ್ರೆ ಏಕಕಾಲಕ್ಕೆ ಚುನಾವಣೆ ಸಾಧ್ಯವಿಲ್ಲ. ಇಂಪ್ರಾಕ್ಟಿಕಲ್ ಇದೆ. ಕಮಿಟಿ ರಿಪೋರ್ಟ್ ನೋಟಿ ಮಾತ್ನಾಡೋಣ, ಕರ್ನಾಟಕ ವಿಧಾನಸಭೆ ಚುನಾವಣೆ ಮೊನ್ನೆಯಾಗಿದೆ.. ಹೇಗೆ ಕಂಬೈಂಡ್ ಮಾಡೋಕೆ ಸಾಧ್ಯ ಎಂದು ಪ್ರಶ್ನಿಸಿದರು.