ರಾಯಚೂರು : ತಂದೆಯೊಬ್ಬ ತನ್ನ 14 ತಿಂಗಳ ಮಗುವನ್ನು ಕೊಂದು ಮತ್ತೆ ಮದುವೆಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಣಸಾವಿ ಗ್ರಾಮದ ನಿವಾಸಿ ಮಹಂತೇಶ್ (32) ಬಂಧಿತ ಆರೋಪಿ. ಅಪರಾಧದ ನಂತ್ರ ಆರೋಪಿ ಪೊಲೀಸರನ್ನ ಸಂಪರ್ಕಿಸಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ತನ್ನ ತಪ್ಪೊಪ್ಪಿಗೆಯಲ್ಲಿ, ಆರೋಪಿ ತನ್ನ ಹೆಂಡತಿಗೆ ಬೇರೆ ಸಂಬಂಧವಿದ್ದು, ಎರಡನೇ ಮದುವೆ ಮಾಡಿಕೊಳ್ಳಲು ಬಯಸುತ್ತೇನೆ ಎಂದು ಉಲ್ಲೇಖಿಸಿದ್ದಾನೆ. ಮೊದಲ ಹೆಂಡತಿಯ ಮಗು ಮರುವಿವಾಹದ ಅವಕಾಶಗಳಿಗೆ ಅಡ್ಡಿಯಾಗಿದೆ ಎಂದು ಭಾವಿಸಿ, ತನ್ನ ಮಗುವನ್ನ ಕೊಂದಿದ್ದೇನೆ ಎಂದು ಮಹಂತೇಶ್ ಹೇಳಿದ್ದಾರೆ. ಇನ್ನು ಆತ ತನ್ನ ಮಗುವನ್ನ ಕೊಂದು ಶವವನ್ನ ಗ್ರಾಮದ ಸಣ್ಣ ಬಂಡೆಗಳ ಕೆಳಗೆ ಬಚ್ಚಿಟ್ಟಿದ್ದನು.
ನಾಪತ್ತೆ ಪ್ರಕರಣ ದಾಖಲಾದ ನಂತರ ಪೊಲೀಸರು ಮಹಂತೇಶ್’ನನ್ನ ಅನುಮಾನಿಸಿ ವಿಚಾರಣೆ ನಡೆಸಿದ್ದಾರೆ. ಮೊದಲಿಗೆ, ಆತ ದೇಹವನ್ನ ಸುಟ್ಟು ಹಾಕಿದ್ದಾಗಿ ಎಂದು ಹೇಳಿದ್ದ, ಮೂರು ದಿನಗಳ ನಂತರ ಅವರು ಮಗುವಿನ ದೇಹವನ್ನ ಅಡಗಿಸಿಟ್ಟ ಸ್ಥಳವನ್ನು ತೋರಿಸಿದ್ದಾನೆ. ಪೊಲೀಸರು ಶವವನ್ನ ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.