ಬೆಂಗಳೂರು : ಸಸ್ಪೆಂಡ್ ಆದ ಮೂರೇ ದಿನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸ್ಟೇ ತಂದಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಡಿಜಿಪಿ ಆದೇಶಕ್ಕೂ ಡೊಂಟ್ ಕೇರ್ ಎಂದಿದ್ದಾರೆ.
ಕಳೆದ ವಾರ ಅಶಿಸ್ತು, ದುರ್ನಡತೆ ಹಿನ್ನೆಲೆಯಿಂದಾಗಿ ಇನ್ಸ್ ಪೆಕ್ಟರ್ ವಿಜಯಕುಮಾರ್ ನ್ನು ಸಸ್ಪೆಂಡ್ ಮಾಡಲಾಗಿತ್ತು. ಇನ್ಸ್ ಪೆಕ್ಟರ್ ವಿಜಯಕುಮಾರ್ ಸಾರ್ವಜನಿಕರು, ಜನಪ್ರತಿನಿಧಿಗಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಈ ಹಿನ್ನೆಲೆಯಿಂದ ವಿಜಯಕುಮಾರ್ ವಿರುದ್ದ ದೂರು ದಾಖಲಾಗಿತ್ತು. ಹಾಗಾಗಿ ವಿಜಯಕುಮಾರ್ ವಿರುದ್ದ ಡಿಜಿಪಿ ಅಲೋಕ್ ಮೋಹನ್ ವಿಚಾರಣೆಗೆ ಆದೇಶಿಸಿದ್ದರು.
ಹಿರಿಯ ಅಧಿಕಾರಿಗಳು ನಡೆಸಿದ್ದ ವಿಚಾರಣೆಯಲ್ಲಿ ವಿಜಯಕುಮಾರ್ ಕರ್ತವ್ಯ ಲೋಪ, ದುರ್ವರ್ತನೆ, ಅಶಿಸ್ತು ಸಾಬೀತಾಗಿತ್ತು. ಈ ವರದಿ ಆಧಾರಿಸಿ ಇನ್ಸ್ ಪೆಕ್ಟರ್ ವಿಜಯಕುಮಾರ್ ರನ್ನು ಡಿಜಿಪಿ ಅಲೋಕ್ ಮೋಹನ್ ಸಸ್ಪೆಂಡ್ ಮಾಡಿದ್ದರು. ಸಸ್ಪೆಂಡ್ ಆದ ಮೂರೇ ದಿನದಲ್ಲಿ ವಿಜಯಕುಮಾರ್ ಡಿಜಿಪಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶಕ್ಕೂ ಡೋಂಟ್ ಕೇರ್ ಎಂದು ಸ್ಟೇ ತಂದಿದ್ದಾರೆ. ವಿಜಯಕುಮಾರ್ ತಡೆಯಾಜ್ಞೆ ತಂದು ಮತ್ತೆ ಕಗ್ಗಲಿಪುರ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಂಡಿದ್ದಾರೆ.