ಬೆಂಗಳೂರು : ನಡೆದಾಡುವ ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಮಂಡಿಬೆಲೆ ಗ್ರಾಮದಲ್ಲಿ ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ದೊಣ್ಣೆ ಚಾಕುಗಳಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವನ ಕೊಲೆಯಾಗಿದ್ದು ಮೂವರಿಗೆ ಚಾಕು ಇರಿಯಲಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದೇವನಹಳ್ಳಿ ತಾಲೂಕಿನ ಮಂಡಿಬೆಲೆ ಗ್ರಾಮದಲ್ಲಿ ಕಳೆದ ರಾತ್ರಿ ಗ್ರಾಮದ ಗಜೇಂದ್ರ ಹಾಗೂ ಪಕ್ಕದ ಮನೆಯ ಮೋಹನ್ ವಿಜಿ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ಮೋಹನ್ ವಿಜಿ ಹೊರಗಿನವರನ್ನ ಕರೆಸಿದ್ದು ಗಲಾಟೆ ಜೋರಾಗಿದೆ. ಮೊದಲು ಮೋಹನ್ ಹಾಗೂ ಮೂವರ ಮೇಲೆ ಗಜೇಂದ್ರ ಚಾಕು ಇರಿದಿದ್ದು ಚಾಕು ಇರಿಯುತ್ತಿದ್ದಂತೆ ಗಜೇಂದ್ರನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಕೊಲೆಯಾದ ಗಜೇಂದ್ರ ಮೃತದೇಹ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಮೋಹನ್, ವಿಜಿ, ಲಿಕಿತ್ಗೆ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎರಡು ಗುಂಪುಗಳ ನಡುವಿನ ಗಲಾಟೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.