ಏಷ್ಯಾ ಕಪ್ ಫೈನಲ್ : ಐತಿಹಾಸಿಕ ದಾಖಲೆಯೊಂದಿಗೆ ಗೆದ್ದು ಬೀಗಿದ ಭಾರತ ತಂಡ : ಹೈದ್ರಾಬಾದ ಹುಡುಗ ಮೀಯಾ ಮ್ಯಾಜಿಕ್ (ಮೊಹಮ್ಮದ್ ಸಿರಾಜ್)ಕಮಾಲ್ ಪ್ರದರ್ಶನ..!
ಶ್ರೀಲಂಕಾ : ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಮೋಘ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಹಲವು ದಾಖಲೆ ಬರೆದಿದೆ. ಅದರಲ್ಲಿ ಬಹುತೇಕ ವಿಶ್ವ ದಾಖಲೆಗಳು ಎಂಬುದೇ ಇಲ್ಲಿ ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ವೇಗಿಗಳು ಲಂಕಾ ನಾಯಕನ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದರು.
ಮೊದಲ ಓವರ್ನಲ್ಲೇ ಪ್ರಥಮ ವಿಕೆಟ್ ಪಡೆದು ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಮಿಯಾ ಮ್ಯಾಜಿಕ್ (ಮಹಮ್ಮದ ಶಿರಾಜ್) ಮ್ಯಾಜಿಕ್ ಶುರುವಾಯಿತು. 4ನೇ ಓವರ್ನಲ್ಲಿ ಒಟ್ಟು 4 ವಿಕೆಟ್ ಕಬಳಿಸಿ ಸಿರಾಜ್ ಲಂಕಾ ತಂಡಕ್ಕೆ ಬಿಗ್ ಶಾಕ್ ನೀಡಿದರು.
ಅಲ್ಲದೆ ಕೇವಲ 7 ಓವರ್ಗಳಲ್ಲಿ ಸಿರಾಜ್ 21 ರನ್ ನೀಡಿ 6 ವಿಕೆಟ್ ಪಡೆದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 2.2 ಓವರ್ಗಳಲ್ಲಿ 3 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಶ್ರೀಲಂಕಾ ತಂಡವು 15.2 ಓವರ್ಗಳಲ್ಲಿ 50 ರನ್ಗಳಿಸಿ ಸರ್ವಪತನ ಕಂಡಿತು.
ಕೇವಲ 51 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು. ನಿರೀಕ್ಷೆಯಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಕೇವಲ 6.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಹಲವು ದಾಖಲೆಗಳು ಟೀಮ್ ಇಂಡಿಯಾ ಪಾಲಾಯಿತು.