ರಾಯಚೂರು : ಮಹಿಳೆಯೊಬ್ಬಳು ಮನೆಯ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ನಗರದ ನೇತಾಜಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಶಿಲ್ಪಾ (28) ಮೃತ ಮಹಿಳೆ ಯಾಗಿದ್ದು, ಶರತ್ ಜೊತೆ ಮದುವೆಯಾಗಿತ್ತು. ನಿನ್ನೆ ರಾತ್ರಿ ತನ್ನ ಗಂಡನ ಮನೆಯ ಮಹಡಿಯಿಂದ ಬಿದ್ದು ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಡಿಯಿಂದ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವೇಳೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಶಿಲ್ಪಾಳ ಗಂಡ ಶರತ್ ಪರಾರಿಯಾಗಿದ್ದಾನೆ. ಬಳಿಕ ಈ ವಿಚಾರ ಮೃತ ಗೃಹಿಣಿಯ ಕುಟುಂಬದವರಿಗೆ ತಿಳಿದಿದ್ದು, ಮಗಳ ಮೃತದೇಹವನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗಂಡ, ಅತ್ತೆ ಮತ್ತು ಮಾವ ಸೇರಿಕೊಂಡು ನನ್ನ ಮಗಳಿಗೆ ಕಿರುಕುಳ ಕೊಡುತ್ತಿದ್ದರು. ಹಾಗೂ ಮದುವೆಯಾದಗಿನಿಂದ ಒಂದೇ ಕೋಣೆಯಲ್ಲಿ ಮಲಗುತ್ತಿರಲಿಲ್ಲ ಎಂದು ಶಿಲ್ಪಾಳ ಗಂಡನ ಮನೆಯವರ ಮೇಲೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಪರಾರಿಯಾಗಿರುವ ಪತಿ ಶರತ್ ಬರೋವರೆಗೂ ಮೃತದೇಹ ಎತ್ತಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ…