ಬೆಂಗಳೂರು: ಬೆಂಗಳೂರನಲ್ಲಿ ಪೊಲೀಸ್ ಟಾರ್ಚರ್ ತಡೆಯಲಾರದೆ ನಾಗರಾಜ್ ಎಂಬಾತ ನೇಣುಬಿಗಿದುಕೊಂಡು ಸಾವಿಗೆ ಶರಣು :
47 ವರ್ಷದ ನಾಗರಾಜ್, ಸನಾವುಲ್ಲಾ ಎಂಬಾತ ಆರಂಭಿಸಿದ್ದ ಎನ್ವಿರಾನ್ಮೆಂಟಲ್ ಪೊಲ್ಯೂಷನ್ ಪ್ರಾಜೆಕ್ಟ್ ಕಂಪನಿಯಲ್ಲಿ ಕೆಲಸಕ್ಕಿದ್ದ. ಈ ಕಂಪನಿ ಲೋನ್ ಬೇಕಾದವರಿಗೆ ಸಾಲ ಕೊಡಿಸಿ ಕಮಿಷನ್ ಪಡೆಯುವ ಕೆಲಸ ಮಾಡ್ತಿತ್ತು. ಹೀಗೆ ಹಲವರಿಂದ ಕಮಿಷನ್ ಪಡೆದ ಸನಾವುಲ್ಲಾ ಕಂಪನಿ ಸಾಲವನ್ನೇ ಕೊಡಿಸದೆ ವಂಚಿಸಿತ್ತು. ಇದರ ಎಫೆಕ್ಟ್ ಆಗಿದ್ದು ಮಾತ್ರ ನಾಗರಾಜ್ ಮೇಲೆ.
ವಂಚನೆ ಕೇಸ್ನಲ್ಲಿ ಸಂಸ್ಥೆ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಮಾಲೀಕ ಸನಾವುಲ್ಲನನ್ನು ಬಿಟ್ಟು ಸಿಬ್ಬಂದಿ ನಾಗರಾಜ್ನನ್ನ ಠಾಣೆಗೆ ಕರೆತಂದು ಟಾರ್ಚರ್ ನೀಡಿದ್ದರಂತೆ, ಬೆಲ್ಟ್ ಶೂನಿಂದ ಇನ್ಸ್ಪೆಕ್ಟರ್ ಹಲ್ಲೆ ಮಾಡಿದ್ದರಂತೆ. ಇದರಿಂದ ಮನನೊಂದ ನಾಗರಾಜ್ ರಘುವನಹಳ್ಳಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವೈಯಾಲಿಕಾವಲ್ ಇನ್ಸ್ಪೆಕ್ಟರ್ ತನ್ನ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ ಅಂತ ನಾಗರಾಜ್ ತನ್ನ ಪತ್ನಿಗೆ ವಿವರಿಸಿದ್ದರಂತೆ. ಅಲ್ಲದೇ ಅವರಿಗೆ ಹಣ ಕೊಡಬೇಕು ಅಂತ ಪತ್ನಿಯ ಮಾಂಗಲ್ಯವನ್ನು ಪಡೆದಿದ್ದರಂತೆ.
ಈ ಹಿಂದೆ ಹೆಣ್ಣೂರು ಠಾಣೆಯಲ್ಲೂ ನಾಗರಾಜ್ ಮೇಲೆ ದೌರ್ಜನ್ಯ ನಡೆದಿತ್ತಂತೆ. ಸದ್ಯ ಕುಟುಂಬಸ್ಥರು ವೈಯಾಲಿಕಾವಲ್ ಪೊಲೀಸರು ಹಾಗೂ ನಟರಾಜ್, ಸನಾವುಲ್ಲಾ, ಯೆರ್ರಿಸ್ವಾಮಿ, ಹಾಗೂ ಹೆಣ್ಣೂರು ಪೊಲೀಸ್ ಠಾಣೆ ಸಿಬ್ಬಂದಿ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.