ವಿಜಯಪುರ : ಅಕ್ರಮ ವಾಗಿ ಮಾವಾ ತಯ್ಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಗೌರಿ ಶಂಕರ್ ಕಾಲೋನಿಯಲ್ಲಿ ಸರಕಾರದ ಪರವಾನಿಗೆ ಇಲ್ಲದೆ ಅಡಿಕೆ ಚೂರು, ತಂಭಾಖು, ಸುಣ್ಣದ ನೀರು ಬೆರೆಸಿ ಅವುಗಳನ್ನ ಚೆನ್ನಾಗಿ ತಿಕ್ಕಿ ಮಿಶ್ರಣ ಮಾಡಿ, ಮಾವಾ ಎಂಬ ಪದಾರ್ಥ ತಯ್ಯಾರಿ ಮಾಡುತ್ತಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತುವ ಆಗಿದ್ದು, ಇದನ್ನ ಅಕ್ರಮವಾಗಿ ತಮ್ಮ ಫಾಯದೆ ಗೋಸ್ಕರ ಮಾರಾಟ ಮಾಡುತ್ತಿದ್ದವರ ಮೇಲೆ ಖಚಿತ ಮಾಹಿತಿ ಪಡೆದು ವಿಜಯಪುರ ಜಿಲ್ಲಾ DSB, CEN, ಹಾಗೂ ದೇವರಹಿಪ್ಪರಗಿ ಪೊಲೀಸರು ದಾಳಿ ಗೈದು ಸಾವಿರಾರು ಮೌಲ್ಯದ ಅಡಕಿ, ತಂಬಾಕು, ಸುಣ್ಣ, ಹಾಗೂ ಮಾರಾಟ ಮಾಡಿ ಬಂದ್ ಹಣವನ್ನ ವಶಕ್ಕೆ ಪಡೆದಿದ್ದಾರೆ.
ಅರುಣ್ ದುಂಡಪ್ಪ ನಾಟಿಕಾರ, ಸಂಗಪ್ಪ @ಸಂಗಮೇಶ್ ಕಲಪ್ಪ ಸಣ್ಣಕ್ಕಿ, ಹಾಗೂ ಇತರರನ್ನು ಬಂದಿಸಿ ದೂರು ದಾಖಲಿಸಿದ್ದಾರೆ.
ಈ ಘಟನೆ ದೇವರ ಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

