ಬೆಂಗಳೂರು ಗ್ರಾಮಾಂತರ: ನೆಲಮಂಗಲದಲ್ಲಿ ಅಂಗಡಿ ಮಾಲೀಕನ ಗಮನವನ್ನು ಬೇರೆಡೆ ಸೆಳೆದು ಕಳ್ಳತನ ಮಾಡಿರುವ ಘಟನೆಯೊಂದು ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮಾಲೀಕನ ಗಮನವನ್ನು ಬೇರೆಡೆ ಸೆಳೆದು ಖದೀಮರು 20 ಸಾವಿರ ರೂ, ಕಳ್ಳತನ ಮಾಡಿದ್ದಾರೆ. ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿ ಈ ಕೃತ್ಯ ಎಸಗಿದ್ದಾರೆ. ಹೇಮಂತ್ ಹಣ ಕಳೆದುಕೊಂಡ ಅಂಗಡಿ ಮಾಲೀಕ ಎನ್ನಲಾಗಿದೆ. ಮಾಲೀಕನು ಮಗನ ಸ್ಕೂಲ್ ಫೀಸ್ ಗಾಗಿ ಹಣ ತೆಗೆದಿಟ್ಟಿದ್ದ ಎನ್ನಲಾಗಿದ್ದು, ಖದೀಮರು ಎಗರಿಸಿದ್ದಾರೆ. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.