ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಮಹಿಳಾ ಉದ್ಯಮಿಯ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಲಾಗಿರುವ ಘಟನೆ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ.
ನಿವೃತ್ತ ಸೇನಾಧಿಕಾರಿ ವಿಜಯ್ ಎಂಬುವವರ ಪತ್ನಿ ಪಂಕಜ ಕಿಡ್ನ್ಯಾಪ್ ಆದವರಾಗಿದ್ದು, ಅವರನ್ನು ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ರೂಂ ಬುಕ್ ಮಾಡುವ ಸೋಗಿನಲ್ಲಿ ಸುಮಾರು 25 ಬುರ್ಖಾಧಾರಿ ಮಹಿಳೆಯರು ಮತ್ತು ಪುರುಷರು ಬಂದು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ.
ಹೋಟೆಲ್ ಉದ್ಯಮಿ ಆಗಿರುವ ಪಂಕಜ ಅವರು, ಎಂಇಎಸ್ ರಿಂಗ್ ರಸ್ತೆಯಲ್ಲಿರುವ ಡಿಎಂ ರೆಸಿಡೆನ್ಸಿಯ ಮಾಲೀಕರಾಗಿದ್ದಾರೆ. ಬುರ್ಖಾ ಧರಿಸಿ ಬಂದವರ ಬಳಿ ಪಂಕಜ ಆಡ್ರೆಸ್ ಪ್ರೂಫ್ ಕೇಳಿದ್ದಾರೆ. ಈ ವೇಳೆ ಸ್ಥಳೀಯರಿಗೆ ರೂಂ ನೀಡುವುದಿಲ್ಲ ಎಂದಿದ್ದಾರೆ. ಈ ಸಂಬಂಧ ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಬುರ್ಖಾಧಾರಿ ಮಹಿಳೆಯರು ಅವರೊಟ್ಟಿಗೆ ಬಂದಿದ್ದ ಪುರಷರು ರೆಸಿಡೆನ್ಸಿಯ ಗಾಜು ಪುಡಿ ಪುಡಿ ಮಾಡಿ, ಹಲ್ಲೆ ನಡೆಸಿದ್ದಾರೆ. ಬಳಿಕ ಬುರ್ಖಾ ಧರಿಸಿದವರು ಸಿನಿಮೀಯ ರೀತಿಯಲ್ಲಿ ಪಂಕಜರನ್ನು ಸುತ್ತುವರೆದು ಕಿಡ್ನ್ಯಾಪ್ ಮಾಡಿದ್ದಾರೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಟೋದಲ್ಲಿ ಪಂಕಜಾ ಅವರನ್ನು ಕಿಡ್ನ್ಯಾಪ್ ಮಾಡಿರುವುದನ್ನು ಗಮನಿಸಿದ ಪೊಲೀಸರು ಬೆನ್ನಟ್ಟಿ ರಕ್ಷಿಸಿದ್ದಾರೆ.