ನಟ ಶಾರುಖ್ ಖಾನಗೆ ಬೆದರಿಕೆ ಕರೆ : Y+ ಸೆಕ್ಯೂರಿಟಿ ನೀಡಿದ ಮಹಾರಾಷ್ಟ್ರ ಪೊಲೀಸ್..!
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಜೀವಕ್ಕೆ ಸಂಭಾವ್ಯ ಆಪತ್ತಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಅವರಿಗೆ ವೈ+ ಭದ್ರತೆಯನ್ನು ಒದಿಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈ+ ಭದ್ರತೆಯು ಆರು ಕಮಾಂಡೊಗಳು ಸೇರಿದಂತೆ 11 ಭದ್ರತಾ ಸಿಬ್ಬಂದಿ ಹಾಗೂ ಒಂದು ಪೊಲೀಸ್ ಎಸ್ಕಾರ್ಟ್ ವಾಹನ ಹೊಂದಿರುತ್ತದೆ.
ಪಾವತಿ ಆಧಾರದಲ್ಲಿ ಶಾರುಖ್ ಅವರಿಗೆ ಈ ಭದ್ರತೆ ಒದಗಿಸಲಾಗಿದ್ದು, ಇದಕ್ಕಾಗಿ ಅವರು ಸ್ವತಃ ಹಣ ಪಾವತಿಸಬೇಕಾಗಿದೆ.
ಕಳೆದ ವಾರ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಶಾರುಖ್ರಿಗೆ ಭದ್ರತೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಬಿಡುಗಡೆಯಾದ “ಜವಾನ್’ ಚಿತ್ರದ ನಂತರ ಅವರಿಗೆ ಬೆದರಿಕೆ ಕರೆಗಳು ಹೆಚ್ಚುತ್ತಿವೆ.