ವಿಜಯಪುರ : ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಘೋಸ್ಟಿ ನಡೆಸಿ ಮಾತನಾಡಿದ SP ರಿಷಿಕೇಶ್ ಸೋನಾವಣೆ IPS ರವರು.
ವಿಜಯಪುರ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ ಪೊಲೀಸ್ ಠಾಣೆಯಲ್ಲಿ ಸನ್-2023 ಸೇ ಸಾಲಿನಲ್ಲಿ 1) ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ & ಮೈನಿಂಗ್, 2) ಪಾರ್ಟ್ ಟೈಮ್ ಜಾಬ್, 3) ಶೇರ್ ಮಾರ್ಕೇಟ್ ಟ್ರೇಡಿಂಗ್, 4) ನೌಕರಿ ಡಾಟ್ ಕಾಮ್, 5) ಬ್ಯಾಂಕ್ ಕಿ.ವೈ.ಸಿ, ಅಪಡೆಟ್, 6) Google Map Location Review&Rating, 7) ಶಾದಿ ಡಾಟ್ ಕಾಮ್, 8) ಕೋರಿಯರ್ ಸರ್ವಿಸ್, 9) ಫೇಸಬುಕ್ ಇನ್ಸ್ಟಾಗ್ರಾಮ್ ಮಾರ್ಟ, 10) ಆನಲೈನ್ ಜೋತಿಷ್ಯ ಮತ್ತು ವಾಸ್ತು, 11) ಕ್ರೆಡಿಟ್ ಡೆಬಿಟ್ ಕಾರ್ಡ ಒಟಿಪಿ, 12) ಪೋನ್ & ಗೂಗಲ್ಪ ಕಸ್ಟಮರ್ ಕೇರ್, 13) ಕಂಪನಿ ಫ್ರೆಂಚೈಸಿ & ಡೀಲರ್ ಶಿಪ್, 14) ವಾಹನ ಮತ್ತು ವಸ್ತುಗಳ ಖರೀದಿಗಾಗಿ ಗೂಗಲ್ ಸರ್ಚ್, 15) ಮೊಬೈಲ್ ಲೋನ್ ಆ್ಯಪ್, 16) ಗೂಗಲ್ನಲ್ಲಿ ಪ್ರತಿಷ್ಟಿತ ಕಂಪನಿಗಳ ಹೆಸರಲ್ಲಿ ವಸ್ತುಗಳನ್ನು ಕಡಿಮೆ ದರದಲ್ಲಿ ಕೊಡುವದಾಗಿ ಹೇಳಿ ಮುಂಗಡ ಹಣ ಸಂದಾಯ ಮಾಡಿಕೊಂಡು ವಂಚಿಸುವದು, ಈ ಪ್ರಕಾರ ವಿವಿಧ ರೀತಿಯಲ್ಲಿ ವಂಚನೆಗೊಳಗಾದವರು ದೂರು ನೀಡಿದ ಮೇರೆಗೆ ಒಟ್ಟು 41 ಸೈಬರ್ ಅಪರಾಧ ಪ್ರಕರಣಗಳು (ಆನ್ಲೈನ್ ವಂಚನೆ) ದಾಖಲಾಗಿರುತ್ತದೆ.
ಸದರಿ ಪ್ರಕರಣಗಳ ತನಿಖೆ ಕುರಿತು ಶಂಕರ ಮಾರಿಹಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪರ ರವರ ಮಾರ್ಗದರ್ಶನದಲ್ಲಿ, ರಮೇಶ ಅವಜಿ ಪೊಲೀಸ್ ಇನ್ಸ್ಪೆಕ್ಟರ್ ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜನರನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡವು ಯಶಸ್ವಿ ಪತ್ತೆ ಕಾರ್ಯಾಚರಣೆ ನಡೆಸಿದ್ದು ಇರುತ್ತದೆ.
* ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 41 ಪ್ರಕರಣಗಳಲ್ಲಿ ಒಟ್ಟು 2,95,11,323/-ರೂಗಳು ವಂಚನೆಯಾಗಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ರವರು ತನಿಖೆ ಕೈಕೊಂಡು ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ನೊಂದ ದೂರುದಾರರ ಬ್ಯಾಂಕ್ ಖಾತೆಗಳಿಗೆ ಒಟ್ಟು 1,08,24,887/-ರೂಗಳನ್ನು ಮರಳಿ ಜಮಾ ಮಾಡಿಸಿದ್ದು, ಇನ್ನೂಳಿದಂತೆ ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 99,76,252/-ರೂ.ಗಳನ್ನು ಡೇಬಿಟ್ ಪ್ರೀಜ್ ಮಾಡಿಸಿದ್ದು, ಈ ಹಣವನ್ನು ಮಾನ್ಯ ನ್ಯಾಯಾಲಯದ ಆದೇಶ ಪಡೆದುಕೊಂಡು ದೂರುದಾರರಿಗೆ ಮರಳಿ ಕೊಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
* ಸನ್-2023 ನೇ ಸಾಲೀನಲ್ಲಿ ಸೈಬರ್ ಆನ್ ಲೈನ್ ಮೂಲಕ ವಂಚನೆಯಾದ 23 ಜನ ನೊಂದ ದೂರುದಾರರು ಗೋಲ್ಡ್ನ್ ಅವರ್ (1 ಗಂಟೆ)ದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ/ MHA National Cyber Crime Portal Helpline No: 1930, ವರದಿಮಾಡಿದ್ದರಲ್ಲಿ ಒಟ್ಟು 11,76,016/-ರೂಗಳು ವಂಚನೆಯಾಗಿದ್ದರಲ್ಲಿ ಅರ್ಜಿಗಳ ಮೂಲಕ ಇತ್ಯರ್ಥಪಡಿಸಿ ದೂರುದಾರರಿಗೆ 9,40,566/-ರೂಗಳನ್ನು ಮರಳಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿದ್ದು ಇರುತ್ತದೆ.
ಈ ಪ್ರಕರಣಗಳ ಪತ್ತೆ ಕುರಿತು ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಾದ ಶ ರಮೇಶ ಅವಜಿ ಪೊಲೀಸ್ ಇನ್ಸ್ಪೆಕ್ಟರ್ ಸಿಇಎನ್ ಪಿಎಸ್, ಪಿಎಸ್ಐ ಮಲ್ಲಿಕಾರ್ಜುನ ತಳವಾರ, ಪಿ.ವಾಯ್. ಅಂಬಿಗೇರ, ಸಿಬ್ಬಂದಿ ಜನರಾದ ಆರ್.ವಿ.ನಾಯಕ, ಎ.ಎಲ್.ದೊಡಮನಿ, ಎಮ್.ಎಮ್.ಕುರವಿನಶೆಟ್ಟಿ, ಸಿದ್ದು ದಾನಪ್ಪಗೊಳ, ಪಿ.ಎಮ್.ಪಾಟೀಲ, ಡಿ.ಎಸ್.ಗಾಯಕವಾಡ, ಆರ್.ಬಿ.ಕೋಳಿ, ಆರ್.ಐ.ಲೋಣಿ, ಎಸ್.ಐ.ಹೆಬ್ಬಾಳಟ್ಟಿ, ಪಿ.ಎಸ್.ಬಿರಾದಾರ, ಕೆ.ಜೆ.ರಾಠೋಡ, ಎ.ಎಚ್.ಪಾಟೀಲ, ಎಸ್.ಆರ್.ಬಡಚಿ, ಎಂ.ಎಚ್.ಇನ್ನೂರ, ಡಿ.ಆರ್.ಪಾಟೀಲ, ಎಂ.ಬಿ.ಪಾಟೀಲ, ಎ.ಎ.ಗದ್ಯಾಳ, ಎಸ್.ಆರ್.ಉಮನಾಬಾದಿ, ಎಂ.ಕೆ, ಹಾವಡಿ ಸಿಬ್ಬಂದಿಯವರ ಕರ್ತವ್ಯವನ್ನು ಶ್ಲಾಘಿಸಿ ನಗದು ಬಹುಮಾನ ಘೋಷಿಸುತ್ತೇನೆ ಎಂದರು. ಅದೇ ರೀತಿ ಸೈಬಲ್ ಅಪರಾಧಗಳನ್ನು ತಡೆಯಲು ಸುರಕ್ಷಾ ಸಲಹೆಗಳನ್ನು ನೀಡಿದರು..
- ಸಲಹೆಗಳು ಇಂತಿವೆ.
ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿಂಗ್ ಮಾಹಿತಿಗಳಾದ ಡೆಬಿಟ್ /ಕ್ರೆಡಿಟ್ ಕಾರ್ಡ ನಂಬರ, ಮುಕ್ತಾಯದ ಅವಧಿ, ಸಿವಿವಿ, ಓಟಿಪಿ, ಯುಪಿಐ ಪಿನ್ ಮತ್ತು ಎಂಪಿನ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. * ಅಪರಿಚಿತ ಮೂಲದ ಎಸ್.ಎಂ.ಎಸ್, ವ್ಯಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುವ ಸಂದೇಶ, ಇ-ಮೇಲ್ಗಳಲ್ಲಿ ಲಿಂಗಳನ್ನು ಕ್ಲಿಕ್ ಮಾಡಬೇಡಿ, ಗೂಗಲ್ನಲ್ಲಿ ಕಂಡುಬರುವ ಕಸ್ಟಮರ್ ಕೇರ್ ನಂಬರ, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆ ಬಗ್ಗೆ ತಿಳಿಯಿರಿ, ಆನಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಅನಧಿಕೃತ ಆ್ಯಪ್ಗಳನ್ನು ಬಳಸಬೇಡಿ, ಹೆಚ್ಚಿನ ಲಾಭ ನೀಡುವುದಾಗಿ ಆಮೀಷ ಒಡ್ಡುವ ಆನಲೈನ್ ಮೂಲದ ವೆಬ್ ಸೈಟ್ /ಆ್ಯಪ್ಗಳ ಮೂಲಕ ಹಣ ಹೂಡಿಕೆ ಮಾಡಬೇಡಿ, ಆನ್ಲೈನ್ ಮೂಲಕ ಉದ್ಯೋಗ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲಿ, ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ. • ನಿಮಗೆ ಲಾಟರಿ, ಉಡುಗೋರ ಇತ್ಯಾದಿ ಬಂದಿದೆ ಎಂದು ಪ್ರಚೋದಿಸಿ, ಅವುಗಳನ್ನು ಪಡೆಯಲು ವಿವಿಧ ಶುಲ್ಕ ಪಾವತಿಸಬೇಕೆಂದು ಹಣದ ಬೇಡಿಕೆ ಇಟ್ಟಲ್ಲಿ ಹಣವನ್ನು ಪಾವತಿಸಬೇಡಿ. • ಸಾಮಾಜಿಕ ಜಾಲತಾಣಗಳ ಮುಖಾಂತರ ಅಪರಿಚಿತರಿಂದ ಬರುವ ವಿಡಿಯೋ ಕರೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ. ನಿಮ್ಮ ಬ್ಯಾಂಕ್ ಖಾತೆಗೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸವರ್ಡಗಳನ್ನು ಬಳಸಿ, ಅಲ್ಲದೇ Two Factor Authentication ಕೂಡಾ ಅಳವಡಿಸಿಕೊಳ್ಳಿ. ಮಕ್ಕಳಿಗೆ ಸಂಭಂಧಪಟ್ಟ ಲೈಂಗಿಕ/ಅಶ್ಲೀಲ ಚಿತ್ರ ದೃಶ್ಯಾವಳಿಗಳನ್ನು ಆನಲೈನ್ ಹುಡುಕುವುದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಅಪರಾಧವಾಗುತ್ತೆ.
• ಪೇಸಬುಕ್, ಇನ್ಸ್ಟಾಗ್ರಾಮ್, ಓ.ಎಲ್.ಎಕ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಿಂದ ಕಡಿಮೆ ದರದಲ್ಲಿ ವಸ್ತಗಳನ್ನು ಮಾರಾಟ ಮಾಡುವುದಾಗಿ ಜಾಹಿರಾತು ನೀಡಿ, ಆರ್ಮಿ ಮತ್ತು ಇತರೆ ಅಧಿಕಾರಿಗಳ ಹೆಸರುಗಳನ್ನು ಹೇಳಿ ವಸ್ತುಗಳನ್ನು ನಿಮ್ಮ ವಿಳಾಸಕ್ಕೆ ಕಳುಹಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುತ್ತಾರೆ.
ಸೈಬರ್ ಅಪರಾಧಗಳಿಗೆ ಸಂಭಂದಿಸಿದಂತೆ ದೂರು ನೀಡಲು ಉಚಿತ ಸಹಾಯವಾಣಿ ಸಂಖ್ಯೆ: 1930 ಕರೆ ಮಾಡಿ ದೂರನ್ನು ನೊಂದಾಯಿಸಿ
* ಯುಪಿಐ ಕ್ಯೂಆರ್ ಕೋಡ್ಗಳು ಕೆವಲ ಹಣ ಸಂದಾಯಕ್ಕಾಗಿ ಮಾತ್ರ ಇದ್ದು, ಹಣ ಸ್ವೀಕರಿಸಲು ಅಲ್ಲ. ಕೃತಕ ಬುದ್ಧಿಮತ್ತೆ (Artificial Inteligence) ಮುಖಾಂತರ ವ್ಯಕ್ತಿಗಳ ನಕಲು ವಿಡಿಯೋ ಕಾಲ್ ಮಾಡಿ ವಂಚಿಸುವದು.
* ಅಂತರ್ ಜಾಲದಲ್ಲಿ ಪರಿಚಯವಾಗುವ ಅಪರಿಚಿತ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ.
* ಅಂತರ್ ಜಾಲದಲ್ಲಿ ಬರುವ ನಂಬಲಅರ್ಹವಲ್ಲದ ಕೊಡುಗೆಗಳ (Offers) ಬಗ್ಗೆ ನಂಬಬಾರದು, ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಂಕರ್ ಮಾರಿಹಾಳ, CEN Inspector ರಮೇಶ್ ಅವಾಜಿ, PSI ಮಲ್ಲಿಕಾರ್ಜುನ್ ತಳವಾರ್, ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.