ವಿಜಯಪುರ : ಜಮಾತ-ಎ- ಇಸ್ಲಾಮೀ ಹಿಂದ್, ವಿಜಯಪುರ ವತಿಯಿಂದ ವಿಜಯಪುರ ನಗರದ, ಬುದ್ದ ವಿಹಾರದಲ್ಲಿ, “ಸಮಾನತೆಯ ಸಮಾಜ ನಿರ್ಮಾಣ” ಏಕೆ ಮತ್ತು ಹೇಗೆ ವಿಷಯದಡಿ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದರ ಅಧ್ಯಕ್ಷತೆಯನ್ನು ಮಹುಮ್ಮದ ಕುಂಞ, ಮಂಗಳೂರು ಇವರು ವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಇಮಾಮ್ ಕಾಸಿಮ್ ಹುಳಿಕಟ್ಟಿ, ಅಧ್ಯಕ್ಷರು ಜಮಾತೆ ಇಸ್ಲಾಮೀ ಹಿಂದ್, ವಿಜಯಪುರ ರವರು ನೆರವೇರಿಸಿದರು.
- ಅತಿಥಿ ಭಾಷಣಕಾರರಾಗಿ
1) ಬಸವ ತತ್ವ ಭಾಷಣವನ್ನು ಜಂಬುನಾಥ್ ಕಂಚ್ಯಾಣಿ ಮಾಡಿದರು, ಪ್ರಜಾಸತ್ತಾತ್ಮಕ ತತ್ತ್ವಗಳ ಪ್ರತೀಕವಾದ ‘ಅನುಭವ ಮಂಟಪ’ವನ್ನು ಸ್ಥಾಪಿಸುವುದರ ಮೂಲಕ ಪ್ರಜಾಸತ್ತಾತ್ಮಕ ತತ್ತ್ವ ವಿಚಾರಗಳಿಗೆ ಮುನ್ನುಡಿ ಬರೆದವರು ಶ್ರೇಷ್ಠ ಸಮಾಜ ಸುಧಾರಕರಾದ ಗುರು ಬಸವಣ್ಣನವರು. 12ನೇ ಶತಮಾನದ ಅಂದಿನ ರಾಜಸತ್ತೆಯ ದಿನಗಳಲ್ಲಿಯೇ ಅವರು ನಾಡಿಗೆ ಪ್ರಜಾಪ್ರಭುತ್ವದ ಬೆಳಕನ್ನು ಹರಿಸಿದ ಶ್ರೇಷ್ಠ ದಾರ್ಶನಿಕ. ಭಾರತೀಯ ಇತಿಹಾಸದಲ್ಲಿಯೇ ಪರಿಪೂರ್ಣ ಸಮಾನತೆಯ ಹಕ್ಕು ಪ್ರತಿಪಾದಿಸಿದ ಕೀರ್ತಿ ಅವರದು. ಒಬ್ಬ ಪ್ರಜಾಪ್ರತಿನಿಧಿ ಯಾವ ಆದರ್ಶದ ನೈತಿಕ ಮಾರ್ಗದಲ್ಲಿ ಸಾಗಬೇಕೆಂಬ ತತ್ತ್ವ ಸಿದ್ಧಾಂತಕ್ಕೆ ಅವರು ಸಾಕ್ಷೀಪ್ರಜ್ಞೆಯಾಗಿದ್ದರು ಎಂದು ಹೇಳಿದರು.
2) ಏಸು ಕ್ರಿಸ್ತರ ತತ್ವವನ್ನು, ಫಾದರ್ ಫ್ರಾನ್ಸಿಸ್ ಮಾತನಾಡಿ, ಏಸು ಕ್ರೈಸ್ತ ರವರು ಜಗತ್ತಿಗೆ ಶಾಂತಿ, ನೆಮ್ಮದಿ, ಸೋಹರ್ಧತೆ, ಎನ್ನು ಸಾರಿದರು. ಪ್ರಜಾ ಪತಿರ್ತೆ ವಾಯಪಿಯಾಮ್, ಆತ್ಮನಾಮ್ ಯಜ್ಞಂ, ಕೃತ್ವಾಪ್ರಯಚ್ಛಿತ್ ಅಂದರೆ ಸರ್ವ ಸೃಷ್ಟಿಕರ್ತನು ಸಕಲ ಜೀವರಾಶಿಯನ್ನು ಪಾಪದಿಂದ ಬಿಡಿಸಲು ತನ್ನ ಸ್ವಂತಃ ದೇಹವನ್ನು ಬಲಿ ಪೀಠದಲ್ಲಿ ಯಜ್ಞ ಮಾಡಬೇಕು, ನರನಾಗಿ ತನ್ನ ಪರಿಶುದ್ಧ ರಕ್ತವನ್ನು ಸುರಿಸಬೇಕು. ಸಕಲ ಸೃಷ್ಟಿಯ ಕರ್ತನಾದ ದೇವರು ಪಾಪದಲ್ಲಿದ್ದ ಸರ್ವ ಮಾನವರನ್ನು ರಕ್ಷಿಸಲು ಕನ್ಯಾ ಮರಿಯಳ ಗರ್ಭದಲ್ಲಿ ಜನಿಸಿ, ಯೇಸುಕ್ರಿಸ್ತನೆಂದು ಕರೆಯಲ್ಪಟ್ಟು 30 ವರ್ಷಗಳ ಕಾಲ ನಝರೇತಿನಲ್ಲಿ ಒಬ್ಬ ಸಾಮಾನ್ಯ ಬಡಿಗನಂತೆ ಬಡಿಗೆ ಕೆಲಸ ಮಾಡಿಕೊಂಡಿದ್ದನು. ನಂತರ ಮುಂದೆ ಮೂರುವರೆ ವರ್ಷಗಳ ಕಾಲ ಆಗಿನ ಇಸ್ರಾಯೇಲ್ ದೇಶವಾಗಿದ್ದ ಗಲೀಲಾಯ, ಸಮಾರ್ಯ ಹಾಗೂ ಯೂದಾಯ ಸೀಮೆಗಳ ಎಲ್ಲಾ ಹಳ್ಳಿಗಳಲ್ಲಿ ಸಂಚರಿಸಿ ದೇವರ ಸಂದೇಶವನ್ನು ಸಾರುತ್ತಾ, ಸರ್ವ ರೋಗಗಳನ್ನು ಗುಣ ಮಾಡುತ್ತಾ, ಸಾಮಾನ್ಯ ಜನರ ಆಶಾಕಿರಣವಾಗಿದ್ದ.
3) ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವಗಳ ಬಗ್ಗೆ ಶ್ರೀನಾಥ್ ಪೂಜಾರಿ ಮಾತನಾಡಿ. ಡಾ. ಬಿ. ಆರ್. ಅಂಬೇಡ್ಕರ್ ರವರು ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವವನ್ನು ಹೊಂದಿದ್ದವರು.
4) ಅಧ್ಯಕ್ಷೀಯ ಭಾಷಣವನ್ನು ಮಹುಮ್ಮದ ಕುಂಞ, ಮಂಗಳೂರು. ರವರು ಮಾಡತಾನಾಡಿ ಪ್ರವಾದಿ ಮೊಹಮ್ಮದ್ ರವರು 7ನೇ ಶತಮಾನದಲ್ಲೇ ಇಡೀ ಮಾನವ ಧರ್ಮಕ್ಕೆ ಶಾಂತಿ, ಸೌಹಾರ್ದತೆ, ಪರಸ್ಪರ ಗೌರವ, ಎಲ್ಲರಲ್ಲಿ ಸಮಾನತೆಯನ್ನು ಸಾರಿ ಅಲ್ಲಾಹ್ ನ ಪವಿತ್ರ ಕುರಾನ್ ದಲ್ಲಿ ನೀಡಿರುವ ಮಾರ್ಗದರ್ಶನ ಅನ್ವಯ ತಾವು ಜಗತ್ತಿಗೆ ಸಾರಿದರು. ತಾವು ಒಂದೇ ಧರ್ಮಕ್ಕೆ ಸೀಮಿತವಾಗದೆ ಇಡೀ ಜಗತ್ತಿನ ಮಾನವ ಕುಲಕ್ಕೆ ಸಂದೇಶವನ್ನು ನೀಡಿದ್ದಾರೆ. ಎಂದು ಹೇಳಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಜನಾಬ್ ಅಬ್ದುಲ್ ರೆಹ್ಮಾನ್ ನಾಸಿರ್, ನಿವೃತ್ತ ಉಪನ್ಯಾಸಕರು ನೆರವೇರಿಸಿದರು. ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳು, ಸರ್ವಧರ್ಮದ ಮುಖಂಡರು, ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.