ವಿಜಯಪುರ : Cricket world cup India vs Afghanistan match, ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದ್ದು, ನಿನ್ನೆ ಭಾರತ ಹಾಗೂ ಅಫ್ಘಾನಿಸ್ತಾನ ಪಂದ್ಯ ನಡೆದಿದ್ದು. ವಿಜಯಪುರ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದೆ.
ದಿನಾಂಕ: 11.10.2023 ರಂದು ಆರೋಪಿತರಾದ 1] ಕಿರಣ ಪಾಂಡುರಂಗ ನಾಯಕ ಸಾ: ವಿಜಯಪುರ. ಹಳ್ಳಿ ಕಾಲೋನಿ ಅಲ್ಲಿಕರೋಜಾ ಹಿಂದುಗಡೆ 2) ಗೌಸಪಾಕ ಮೊಹಮ್ಮದಲಿ ಹಾವೇರಿ ಸಾ: ವಿಜಯಪುರ ಕೆ.ಎಚ್.ಬಿ. ಕಾಲೋನಿ 3) ದಾವಲ ಅಬ್ದುಲ ಪಟೇಲ ಸಾ: ವಿಜಯಪುರ ರಾಣಿ ಬಗೀಚಾ ಸಿಎಮ್ಸಿ ಕಾಲೋನಿ ಇವರು ವಿಜಯಪುರದ ಶಹರದ ಮನಗೂಳಿ ರಸ್ತೆಗೆ ಇರುವ ಜೀರೊ ಪಾಯಿಂಟ. ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತಮ್ಮ ತಮ್ಮ ಪಾಯಿದೆಗೊಸ್ಕರ, ಏಕದಿನ ಐಸಿಸಿ ವಿಶ್ವಕಪ್ ಕ್ರಿಕೆಟ್ ತಂಡಗಳ ಬಗ್ಗೆ ಜನರಿಗೆ ಭಾರತ ಮತ್ತು ಅಪಘಾನಿಸ್ಥಾನ ತಂಡಗಳ ನಡುವೆ ನಡೆದ ಕ್ರಿಕೆಟ್ ಆಟದಲ್ಲಿ ಭಾರತ ತಂಡ ಗೆದ್ದರೆ 1000ರೂ ಗಳಿಗೆ 3000ರೂ ಗಳನ್ನು ಕೊಡುತ್ತೇವೆ. ಮತ್ತು ಅಪಘಾನಿಸ್ಥಾನ ತಂಡ ಗೆದ್ದರೆ 1000ರೂ ಗಳಿಗೆ 2000 ರೂಗಳನ್ನು ಕೊಡುವ ಕರಾರಿನ ಮೇಲೆ ಬೆಟ್ಟಿಂಗ್ ಚೀಟಿ ಬರೆದುಕೊಂಡು ಜೂಜಾಟದಲ್ಲಿ ತೊಡಗಿದಾಗ ಸಿಕ್ಕಿಬಿದ್ದಿದ್ದು. ದೀಪಾ ವೈ ಗೋಡೆಕರ ಪಿಎಸ್ಐ [ಕಾಸು) ಜಲನಗರ ಪೊಲೀಸ್ ಠಾಣೆ ವಿಜಯಪುರ ಹಾಗೂ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.