ವಿಜಯಪುರ : ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಮೆಕ್ಕೆಜೋಳ ಸಂಸ್ಕರಣೆ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ.
ಮೃತಪಟ್ಟ ಕಾರ್ಮಿಕರ ಕುಟುಂಬದವರಿಗೆ ತಲಾ 7 ಲಕ್ಷ ರೂ (ಕಾರ್ಖಾನೆ ಮಾಲೀಕರಿಂದ 5 ಲಕ್ಷ ಹಾಗೂ ಸರ್ಕಾರದಿಂದ 2 ಲಕ್ಷ) ಪರಿಹಾರ ಘೋಷಣೆ ಮಾಡಲಾಗಿದೆ.
ಜೊತೆಗೆ ಮೃತರೆಲ್ಲರೂ ಬಿಹಾರ ರಾಜ್ಯದವರಾಗಿದ್ದು, ಮೃತದೇಹಗಳನ್ನು ವಿಮಾನದ ಮೂಲಕ ಪಾಟ್ನಾಗೆ ಸಾಗಿಸಿ ಅಲ್ಲಿಂದ ಅವರ ಮನೆಗಳಿಗೆ ತಲುಪಿಸಲಾಗುವುದು, ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
ಈ ಕುರಿತು ರಾಜಗುರು ಫಾರ್ಮ್ ಮಾಲೀಕ ಕಿಶೋರ್ ಹಂಜಾರಿಮಲ್ ಜೈನ್, ಹಾಗೂ ಅಲ್ಲಿಯ ಸೂಪರವೈಸರ್ ಪ್ರಕಾಶ್ ದುಮಗೊಂಡ ವಿರುದ್ದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿಯ ಆರೋಪಿತರು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಹಾಗೂ ಗೊಡಾವಿನ ಯಂತ್ರೋಪಕರಣ ದುರಸ್ತಿ ಇದೆ ಅಂತಾ ಗೊತ್ತಿದ್ದರೂ ಕೂಡಾ ನಿರ್ಲಕ್ಷ್ಯತನ ತೋರಿ ಸದರಿಯವರಿಗೆ ಕೆಲಸಕ್ಕೆ ಹಚ್ಚಿದಾಗ ಸದರ ಮೆಕ್ಕೆ ಜೋಳ ಕ್ಲೀನಿಂಗ್ ಮೆಷೀನ್ ಕುಸಿದು ಬಿದ್ದು 1) ಕೃಷ್ಣಾ. 2)ರಾಜೇಶಕುಮಾರ ಮುಖಿಯಾ. ವಯಾ 25 ವರ್ಷ 3) ಸಂಬು ತಂದೆ ಬಿಂದೇಶ್ವರಿ ಮುಖಿಯಾ. ವಯಾ 43 ವರ್ಷ,4) ಲೂಕೊ ಯಾದವ, 5) ದುಲ್ಲಾರಚಂದ ಮುಖಿಯಾ ವಯಾ 47, 6) ರಾಮ್ ಬೀಚ್ ಮುಖಿಯಾ. ವಯಾ 43 ವರ್ಷ. 7) ರಾಮ್ಬಾಲಕ ಮುಖಿಯಾ, ವಯಾ58 ವರ್ಷ, ಇವರು ಮೃತರಾಗಿದ್ದು,
ಅಲ್ಲದೇ ಸಂಜುಕುಮಾರ @ ಸೋನು ಕರಮಚಂದಗಾಂಧಿ,ರವೀಶಕುಮಾರ ದೊಡ್ಡರ, ಅನೀಲ ತಂದೆ ಕಲ್ಲೇಶ್ವರ ಮುಖಿಯಾ, ಕಲ್ಲೇಶ್ವರ ಮುಖಿಯಾ ಇವರಿಗೆ ಗಾಯಗಳಾಗಿದ್ದು ಸದರ ಘಟನೆಗೆ ಇದರಲ್ಲಿಯ ರಾಜಗುರು ಫರ್ಮ ಮಾಲಿಕ ಕಿಶೋರ ತಂದೆ ಹಂಜಾರಿಮಲ್ ಜೈನ್ ಹಾಗೂ ಪ್ರಕಾಶ್ ದುಮಗೊಂಡ ಇಬ್ಬರು ಕಾರಣರಾಗಿದ್ದು, ಸದರಿಯವರ ಮೇಲೆ ಪ್ರಕರಣ ದಾಖಲಾಗಿದೆ.