ವಿಜಯಪುರದ ಯುವಕ ದೆಹಲಿಯ JNUನಲ್ಲಿ M.A. 1ನೇ ರ್ಯಾಂಕ್ ಪಡೆದು ರಾಜ್ಯಶಾಸ್ತ್ರದಲ್ಲಿ Phd ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾನೆ.
ವಿಜಯಪುರ: ಬಬಲೇಶ್ವರ ಮತ ಕ್ಷೇತ್ರದ ಸಂಗಾಪುರ ಎಸ್. ಹೆಚ್. ಗ್ರಾಮದ ಪ್ರಗತಿಪರ ರೈತರಾದ ಅಶೋಕ ಬಡ್ರಿ ಅವರು ಯಶಸ್ವಿ ಕೃಷಿಕರಾಗಿ, ತಮ್ಮ ಪುತ್ರ ಆದರ್ಶಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ. ಈ ಯುವಕ ದೆಹಲಿಯ JNUನಲ್ಲಿ M.A. 1ನೇ ರ್ಯಾಂಕ್ ಪಡೆದು, ಶಿಕ್ಷಣ ಮುಂದುವರೆಸಿ, ರಾಜ್ಯಶಾಸ್ತ್ರದಲ್ಲಿ Phd ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾನೆ.
ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ತೋರಿರುವ ಈ ಯುವಕ ಆಸ್ಟ್ರೇಲಿಯಾದಲ್ಲಿ Phd ಪಡೆಯುವ ಉದ್ದೇಶದಿಂದ ಅಲ್ಲಿಗೆ ಹೊರಟಿದ್ದಾನೆ. ಈತನ ಯಶೋಗಾಥೆ ನಮ್ಮೆಲ್ಲ ರೈತರ ಮಕ್ಕಳಿಗೆ ನಿಜಕ್ಕೂ ‘ಆದರ್ಶ’ವಾಗಿದೆ. ಈತನ ಸಂಶೋಧನೆ ಯಶಸ್ವಿಯಾಗಲಿ. ಬಸವನಾಡಿನ ಕೀರ್ತಿ ಜಗದಗಲ ಪಸರಿಸಲಿ ಎಂದು ಹಾರೈಸುತ್ತೇನೆ ಎಂದು ಸಚಿವ ಎಂ ಬಿ ಪಾಟೀಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.