ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಸಿಗರೇಟ್ ಮಳಿಗೆ ಕಳ್ಳತನ ಪ್ರಕರಣವನ್ನ ಬೇಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ಸಿಂದಗಿ ಪಟ್ಟಣದ ಸಿಗರೇಟ್ ದಾಸ್ತಾನು ಮಳಿಗೆಯೊಂದರಿಂದ ಒಟ್ಟು 40 ಲಕ್ಷ 87 ಸಾವಿರ ಮೌಲ್ಯದ ಸಿಗರೇಟ್ ಕಳ್ಳತನ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎರಡು ತಂಡ ರಚನೆ ಮಾಡಿದ್ದರು. ಈ ತಂಡಗಳು ತನಿಖೆ ನಡೆಸಿ ರಾಜಸ್ಥಾನ ಮೂಲದ ಜಿತೇಂದ್ರಕುಮಾರ ಎನ್ನುವ ವ್ಯಕ್ತಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಇನ್ನಿಬ್ಬರ ಪತ್ತೆಗೆ ತನಿಖೆ ನಡೆದಿದೆ.