ವಿಜಯಪುರ: ನಗರದಲ್ಲಿ ಇತ್ತಿಚಿಗೆ ಘಟಿಸುತ್ತಿದ್ದ ಮನೆ ಕಳ್ಳತನ ಪ್ರಕರಣಗಳ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ರಿಷಿಕೇಶ ಸೊನಾವಾಣಿ-ಐಪಿಎಸ್ ವಿಜಯಪುರ ಜಿಲ್ಲೆ,
ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಂಕರ ಮಾರಿಹಾಳ-ಕೆಎಸ್ಪಿಎಸ್ ಹಾಗೂ ರಾಮನಗೌಡ ಹಟ್ಟಿ-ಕೆಎಸ್ಪಿಎಸ್ ವಿಜಯಪುರ ಜಿಲ್ಲೆ. ಹಾಗೂ ಪೊಲೀಸ್ ಉಪ-ಅಧೀಕ್ಷಕರು ಬಸವರಾಜ. ಯಲಿಗಾರ ವಿಜಯಪುರ ರವರ ಮಾರ್ಗದರ್ಶನದಲ್ಲಿ ಮಲ್ಲಯ್ಯ ಪಠಪತಿ-ಸಿಪಿಐ ಗೋಲಗುಮ್ಮಜ ವೃತ್ತ ವಿಜಯಪುರ. ಹಾಗೂ ಸುಷ್ಮಾ ಬೀ ಎನ್- ಪೀಎಸ್ಐ (ಅವಿ). ರಾಜು ಪೂಜಾರಿ ಪಿಎಸ್ಐ(ಕಾ&ಸು) ಗೋಲಗುಮ್ಮಜ್ ಪೊಲೀಸ್ ಠಾಣೆ ಹಾಗೂ ಎ.ಎಸ್.ಐ ಗಳಾದ ಪ್ರಭು ಹಿಪ್ಪರಗಿ, ಎಸ್ ಆರ್ ಹಂಗರಗಿ ಮತ್ತು ಸಿ.ಎಚ್.ಸಿ.ಗಳಾದ- ವೈ.ಪಿ.ಕಬಾಡೆ ಸಿಪಿಸಿ ಗಳಾದ- ಸಚಿನ ನಂದೇಶ, ಕಲಾದಗಿ, ಮಕಣಾಪೂರ, ಅಬ್ದುಲ್ಖಾದರ ಕೋಲೂರ, ಮಹಾದೇವ ಮಾನೆ, ಸಂಜೀವ ಬಿರಾದಾರ. ಇವರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಿದ್ದು,
ಸದರಿ ತನಿಖಾ ತಂಡವು ಆರೋಪಿತರ ತಪಾಸಣೆ ಮಾಡಿ.
ಸಿಂದಗಿ ನಾಕಾ ಹತ್ತಿರ ನಾಕಾ ಬಂಧಿಹಾಕಿದ್ದು. ಮನೆಗಳ್ಳತನ ಮಾಡಲು
ಮನೆಗಳಿಗೆ ಹಾಕಿದ ಕೀಲಿಯನ್ನು ಮುರಿಯಲು ಕಬ್ಬಿಣದ ಸಲಾಕೆಗಳ ತೆಗೆದುಕೊಂಡು ಸಿದ್ದ ಸ್ಥಿತಿಯಲ್ಲಿ
ಬರುವಾಗ ಅವರನ್ನು ಹಿಡಿದು ಗೋಲಗುಮ್ಮಜ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು
ವಿಚಾರಣೆಗೆ ಒಳಪಡಿಸಿದಾಗ ಸದರಿ ಆರೋಪಿತರಾದ-
01 ಜಂಪು @ ಜಂಪ್ಯಾ ತಂ|ರಾಜು ಚವ್ಹಾಣ, ವಯಾ-36 ವರ್ಷ, ಜಾತಿ-ಹರಣಶಿಕಾರಿ, ಉದ್ಯೋಗ-ಕೂಲಿ ಕೆಲಸ ಸಾ॥ ಹರಣಶಿಕಾರಿ ಕಾಲೋನಿ ವಿಜಯಮರ
02. ಪರಶುರಾಮ @ ಪರಶ್ಯಾ ತಂದೆ ಲಕ್ಷ್ಮಣ ಕಾಳೆ,ವಯಾ-25 ವರ್ಷ, ಜಾತಿ-ಹರಣಶಿಕಾರಿ, ಉದ್ಯೋಗ-ಚಾಲಕ ಸಾ॥ ಹರಣಶಿಕಾರಿ ಕಾಲೋನಿ ವಿಜಯಮರ
03. ಬಸವರಾಜ ಬಸ್ಯಾ ತಂ|ಶಿವಾಜಿ ಚವ್ಹಾಣ, ವಯಾ-34 ವರ್ಷ ಜಾತಿ-ಹರಣಶಿಕಾರಿ, ಉದ್ಯೋಗ-
ಕೂಲಿ ಕೆಲಸ ಸಾ॥ ಹರಣಶಿಕಾರಿ ಕಾಲೋನಿ ವಿಜಯಮರ
ಈ ಪ್ರಕಾರ 03 ಜನರಿಗೆ ದಸ್ತಗಿರ ಮಾಡಿ ಸ್ವಖುಷಿ ಹೇಳಿಕೆ ಪಡೆದುಕೊಂಡಿದರಲ್ಲಿ ವಿಜಯಪುರ ಶಹರದ ಗೋಲಗುಮ್ಮಜ್ ಪೊಲೀಸ್ ಠಾಣೆಯ 01. ಜಲನಗರ ಪೊಲೀಸ್ ಠಾಣೆಯ 01, ಆದರ್ಶನಗರ ಪೊಲೀಸ್ ಠಾಣೆಯ 02 ಪ್ರಕರಣದ ಹೀಗೆ ಒಟ್ಟು= 04 ಪ್ರಕರಣಗಳಲ್ಲಿ ಗುನ್ನೆ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ.
ಅಲ್ಲದೇ ಮನೆ ಕಳ್ಳತನ ಮಾಡಿದ ಮಾಲುಗಳ ಪೈಕಿ ಸಿಕ್ಕಿರುವ 03 ಜನ ಆರೋಪಿತರ ಕಡೆಯಿಂದ ಪ್ರಕರಣಗಳಿಗೆ ಸಂಭಂದಿಸಿದ ಒಟ್ಟು 281.5 ಗ್ರಾಂ ಬಂಗಾರದ ಆಭರಣಗಳು ಕಿಮ್ಮತ್ತ 16,88,000/- ರೂ ಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಸಿಸಿರುತ್ತಾರೆ.
ಎಂದು ವಿಜಯಪುರ sp ರಿಷಿಕೆಷ್ ಭಗವಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.