ವಿಜಯಪುರ : ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ಲೈಂಗಿಕವಾಗಿ ಬಳಕೆ ಮಾಡಿಕೊಂಡ ಆರೋಪವನ್ನು ಪೊಲೀಸ್ ಕಾನ್ಸ್ಟೇಬಲ್ ಎದುರಿಸುತ್ತಿದ್ದಾರೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ವಿನಾಯಕ್ ಟಕ್ಕಳಕಿ ಓರ್ವ ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ದೈಹಿಕವಾಗಿ ಬಳಕೆ ಮಾಡಿಕೊಂಡ ಆರೋಪ ಎದರುಸುತ್ತಿದ್ದಾರೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿ ಕಳೆದ ಎಂಟು ತಿಂಗಳ ಹಿಂದೆ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿಗೆ ಪರಿಚಯವಾಗಿದ್ದಳು. ಈ ಪರಿಚಯ ಪರಸ್ಪರ ಫೋನ್ ನಂಬರ್ಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿತ್ತು. ಬಳಿಕ ಇಬ್ಬರ ಮಧ್ಯೆ ಪರಸ್ಪರ ವಾಟ್ಸಪ್ ನಲ್ಲಿ ಮೆಸೇಜ್ ಮಾಡೋದು, ಕಾಲ್ ಮಾಡೋದು ಆರಂಭವಾಗಿತ್ತು. ಇದೇ ಸ್ನೇಹ ಇಬ್ಬರ ನಡುವೆ ಪ್ರೀತಿಗೂ ಕಾರಣವಾಗಿತ್ತು. ಇದೇ ಸಲುಗೆಯಲ್ಲಿ ನಿನ್ನ ಮದುವೆಯಾಗೋದಾಗಿ ನಂಬಿಸಿ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿ ಯುವತಿ ಜೊತೆಗೆ ಹಲವಾರು ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದನಂತೆ. ಹಲವಾರು ಬಾರಿ ಯುವತಿಯನ್ನು ದೈಹಿಕವಾಗಿ ಬಳಕೆ ಮಾಡಿಕೊಂಡ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿ ಇತ್ತೀಚೆಗೆ ಯುವತಿಯನ್ನು ಮದುವೆಯಾಗಲು ನಿರಾಕರಣೆ ಮಾಡುತ್ತಾ ಬಂದಿದ್ದ. ಹಲವಾರು ಬಾರಿ ಯುವತಿ ಕಾನ್ಸ್ಟೇಬಲ್ ವಿನಾಯಕಗೆ ಮನವಿ ಮಾಡಿಕೊಂಡರೂ ಆಕೆಯನ್ನ ಮದುವೆಯಾಗಲು ನಿರಾಕರಿಸುತ್ತಾ ಬಂದಿದ್ದ. ಇದರಿಂದ ರೋಸಿ ಹೋದ ಯುವತಿ ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಕಾನ್ಸ್ಟೇಬಲ್ ವಿನಾಯಕ ಟಕ್ಕಳಿಕೆ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ವಿನಾಯಕ ಜೊತೆ ತೆಗೆದುಕೊಂಡ ಫೋಟೋಗಳನ್ನು ಮತ್ತು ಮೆಸೇಜ್ ಚಾಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಪೊಲೀಸರಿಗೆ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಯಾವಾಗ ಯುವತಿ ತನ್ನನ್ನ ಮದುವೆಯಾಗಬೇಕೆಂದು ದುಂಬಾಲು ಬಿದ್ದಳೋ ಆಗಿನಿಂದ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿ ಸೇವೆಗೆ ಗೈರಾಗಿ ನಾಪತ್ತೆಯಾಗಿದ್ದಾನೆ. ಕಳೆದ 20 ದಿನಗಳಿಂದ ಗಾಂಧಿ ಚೌಕ್ ಪೊಲೀಸ್ ಠಾಣೆಗೆ ಆತ ಸೇವೆಗೆ ಹಾಜರಾಗಿಲ್ಲ. ಯುವತಿ ಮೇಲೆ ಅತ್ಯಾಚಾರ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿನಾಯಕ ಟಕ್ಕಳಕಿ ಪತ್ತೆಗೆ ಬೀಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ವಿನಾಯಕ ಟಕ್ಕಳಕಿ ಬಂಧನವಾಗಬೇಕು. ಕಾನೂನಿನ ಪ್ರಕಾರ ಆತನಿಗೆ ಶಿಕ್ಷೆ ಆಗಬೇಕು. ಇಲ್ಲವೇ ನನ್ನ ಜೊತೆ ಆತ ಮದುವೆಯಾಗಬೇಕೆಂದು ಯುವತಿ ಪಟ್ಟು ಹಿಡಿದಿದ್ದಾಳೆ. ಪೊಲೀಸ್ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿಯ ಲವ್, ಸೆಕ್ಸ್, ದೋಖಾ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.