ವಿಜಯಪುರ ಪೊಲೀಸರಿಂದ ಭರ್ಜರಿ ಬೇಟೆ ಕೊಲೆಯಾದ ಶೋಭಾ ಲಮಾಣಿಯ ಕೊಲೆಗಡುಕರು ಅಂದರ್
ದಿನಾಂಕ: 31.10.2024 ರ ಬೆಳಿಗ್ಗೆ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ನಾಳ ತಾಂಡಾದ ನಿವಾಸಿ ಶೋಭಾ ಗಂಡ ರೋಹಿತ ಲಮಾಣಿ ನಾಯಕ್, 30 ವರ್ಷ ಇವಳ ಕೊಲೆಯಾಗಿದ್ದು ಈ ಕುರಿತು ಶ್ರೀಮತಿ ಶಾಂತವ್ವ ಬಸಪ್ಪ ಲಮಾಣಿ ರಾಠೋಡ, ಸಾ ಮುದ್ನಾಳ ಎಲ್ಟಿ ಕೊಟ್ಟಿರುವ ದೂರಿನ ಮೇರೆಗೆ ಮುದ್ದೇಬಿಹಾಳ ಪೊಲೀಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖಾ ತಂಡದ ಪ್ರಯತ್ನದಿಂದ ಕೊಲೆ ಮಾಡಿದ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಮಾಡಿದ ಆರೋಪಿ 1 )ಮುತ್ತಪ್ಪ ಶಿವಪ್ಪ ಅಮರಪ್ಪಗೋಳ, 25 ವರ್ಷ, ಸಾ|| ಮುಟ್ಟಾಳ 2 ) ಸುರೇಶ ನಿಂಗಪ್ಪ ದೊಡಮನಿ, 31 ವರ್ಷ, ಸಾ|| ಮುನ್ನಾಳ
ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿದ್ದಾರೆ
ಆರೋಪಿತರಿಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಬಲ್ಲಪ್ಪ ನಂದಗಾಂವಿ, ಡಿಎಸ್ಪಿ ಬ.ಬಾಗೇವಾಡಿ, ಮಲ್ಲಿಕಾರ್ಜುನ ತುಳಸಿಗೇರಿ, ಸಿಪಿಐ ಮುದ್ದೇಬಿಹಾಳ, ಶ್ರೀ ಸಂಜಯ ತಿಪರಡ್ಡಿ ಪಿಎಸ್ಐ (ಕಾ&ಸು), ಶ್ರೀಮತಿ ಆರ್.ಎಲ್.ಮನ್ನಾಬಾಯಿ ಪಿಎಸ್ಐ (ಅ.ವಿ) ಮುದ್ದೇಬಿಹಾಳ ಠಾಣೆ ಹಾಗೂ ಸಿಬ್ಬಂದಿ ಜನರಾದ ಆರ್.ಎಸ್.ಪಾಟೀಲ, ಸಲೀಂ ಹತ್ತರಕಿಹಾಳ, ಸಂಗಮೇಶ ಚಲವಾದಿ, ವಿರೇಶ ಹಾಲಗಂಗಾಧರಮಠ, ರಮೇಶ ಮದರಿ, ಚನ್ನು ಬಿರಾದಾರ, ಎಮ್.ಬಿ.ಹೂಗಾರ. ಎನ್.ಆರ್.ಚೌದರಿ, ಮಂಜು ಬುಳ್ಳಾ, ಪ್ರಭು ಠಾಣಿದ, ವಿ.ಎಸ್.ಹಿಪ್ಪರಗಿ ಹಾಗೂ ಗುಂಡು ಗಿರಣಿವಡ್ಡರ ಇವರ ಕಾರ್ಯವನ್ನು ಪ್ರಶಂಶಿಸಿ ಸೂಕ್ತ ಬಹುಮಾನ ಘೋಷಿಸಲಾಗಿದೆ.