42ರ ಪ್ರಿಯಕರ 19ರ ಪ್ರಾಯದ ಪ್ರೇಮಿ ಇವರ ಪ್ರೇಮ ವಿವಾಹ ಅಂತ್ಯ ಕಂಡಿದ್ದು ರಕ್ತ ಪಾತದಲ್ಲಿ
ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನೆಯವರು ಪ್ರಿಯತಮನ್ನನು ಯುವತಿಯ ಮನೆಯವರು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಚಿತ್ರದುರ್ಗದ ಕೊಣನೂರು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಯುವತಿ ರಕ್ಷಿತಾ ಮನೆಯವರು ಪ್ರಾರಂಭದಿಂದಲೇ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.
ಹಿಂದೆ ಇವರಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಇದರಿಂದ ಕೋಪಗೊಂಡ ರಕ್ಷಿತಾ ಮನೆಯವರು ನಿನ್ನೆ ನಡು ರಸ್ತೆಯಲ್ಲೇ 20 ಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಮಂಜುನಾಥನ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಚಿತ್ರಗುರ್ಗ ಆಸ್ಪತ್ರೆಯಲ್ಲಿ ಮಂಜುನಾಥನ ತಂದೆ ಚಂದ್ರಪ್ಪ ತಾಯಿ ಅನುಸುಯ್ಯ ಚಿಕಿಸ್ತೆ ನೀಡಲಾಗುತ್ತಿದೆ .
ಆರೋಪಿತರಾದ ರಕ್ಸಿತಾ ತಂದೆ ಜಗದೀಶ ಸಂಬಂಧಿಕರಾದ ಕಲ್ಲೇಶ್, ಈಶ್ವರಪ್ಪ, ನಿಂಗಪ್ಪ, ವಿಶ್ವನಾಥ, ಹರೀಶ್ ಎಂಬುವವರು ಹಲ್ಲೆಮಾಡಿ ಹತ್ತೆಯನ್ನು ಮಾಡಿದ್ದಾರೆ. ಬ್ರಹ್ಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.