ಹೂಗಾರ ಸಮಾಜದ ಬುದ್ಧಿಮಾಂದ್ಯ ಯುವಕ ಶಂಕ್ರಪ್ಪ ಹೂಗಾರನ ಕಿಡ್ನಿ ಮಾರಾಟ ಮಾಡಿ ಕೊಲೆ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ರಾಯಚೂರು ಜಿಲ್ಲಾ ಹೂಗಾರ ಸಮಾಜ ಸಂಘ ಒತ್ತಾಯಿಸಿದ್ದಾರೆ
ಇಂದು ಜಿಲ್ಲಾಧಿಕಾರಿ ಮೂಲಕ ಗೃಹಸಚಿವರಿಗೆ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಯಾದಗಿರಿ ಜಿಲ್ಲೆಯ ಕಕ್ಕೇರಿ ಬಳಿಯ ಮಂಜಲಾಪುರದ ಗ್ರಾಮದ ಶಂಕ್ರಪ್ಪ ಹೂಗಾರ ಎಂಬ ಬುದ್ದಿಮಾಂದ್ಯ ಯುವಕನಿಗೆ ಚಿಕಿತ್ಸೆ ನೆಪದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಎರಡೂ ಕಿಡ್ನಿ ಕದ್ದು ಅವನನ್ನು ಕೊಂದು ಚಿತಾಗಾರದಲ್ಲಿ ಸುಟ್ಟು ಹಾಕಿದ್ದಾರೆ ಎಂದು ದೂರಿದರು.
2018 ರಲ್ಲಿ ನಡೆದ ಈ ಪ್ರಕರಣದಲ್ಲಿ ತಮ್ಮ ಮಗನ ಕೊಲೆಯಾಗಿದೆ ಎಂಬ ಸತ್ಯ ಇಲ್ಲಿಯವರೆಗೆ ತಾಯಿಗೂ ತಿಳಿದಿಲ್ಲ. ಆ ಯುವಕನನ್ನು ಬೆಂಗಳೂರಿನ ಫೋಸಾ ಎಂಬ ಆಸ್ಪತ್ರೆಗೆ ಸೇರಿಸಿದಾಗ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಎಂದು ಹೇಳಿ ಅವರದ್ದೇ ಅಂಗ ಸಂಸ್ಥೆಯಾದ ಆರ್.ವಿ.ಎಮ್ ಎಂಬ ಸಂಸ್ಥೆಗೆ ಕಳುಹಿಸಿ, ಅಲ್ಲಿಂದ ಕುಟುಂಬದವರ ಗಮನಕ್ಕೂ ತರದೇ ಏಕತಾ ಚಾರಿಟೆಬಲ್ ಟ್ರಸ್ಟ್ ನಡಿ ನಡೆಯುತ್ತಿರುವ ಆಶ್ರಮಕ್ಕೆ ಸೇರಿಸಲಾಗಿದೆ. ಆ ಬಳಿಕ ಅಲ್ಲಿಂದ ನಿಮಾನ್ಸ್ ಆಸ್ಪತ್ರೆಗೆ ಸೇರಿಸುವ ನಾಟಕವಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಂಕ್ರಪ್ಪ ಎಂಬ ನಮ್ಮ ಹೂಗಾರ ಸಮಾಜದ ಅಮಾಯಕ ಬಡ ಹುಡುಗನ ಎರಡೂ ಕಿಡ್ನಿ ಕದ್ದು ಕೊಲೆ ಮಾಡಿ ಆತನ ಶವವನ್ನು ಬೆಂಗಳೂರಿನ ಚಿತಾಗಾರವೊಂದರಲ್ಲಿ ಸುಟ್ಟು ಹಾಕಲಾಗಿದೆ ಎಂದು ಆಪಾದಿಸಿದರು.
ಈ ಬಗ್ಗೆ ಪೊಲೀಸರ ಮೂಲಕ ನ್ಯಾಯಕ್ಕಾಗಿ ಸುಮಾರು ನಾಲ್ಕು ವರ್ಷಗಳ ಕಾಲ ಹೋರಾಟ ನಡೆಸಿದಾಗ ಸರಿಯಾಗಿ ಸ್ಪಂದನೆ ದೊರೆತಿಲ್ಲ.. ಈ ಬಗ್ಗೆ ಮಾನವ ಹಕ್ಕುಗಳ ಆಯೋಗದ ಮೊರೆ ಹೋದಾಗ ಇಲಾಖೆನಡೆಸಿದ ತನಿಖೆಯಲ್ಲಿ ಯುವಕ ಶಂಕ್ರಪ್ಪ ಹೂಗಾರ ನದ್ದು ಕೊಲೆ, ಕಿಡ್ನಿ ಕದ್ದು ಸಾಯಿಸಿರುವ ಕೃತ್ಯ ಬಯಲಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಐವರು ಪೊಲೀಸ್ ಇಲಾಖೆಯವರ ವಿರುದ್ಧ ಆಯೋಗವೇ 14 ಲಕ್ಷ ದಂಡ ವಿಧಿಸಿದೆ. ಆ ಬಳಿಕ ಸಿಐಡಿಗೆ ವಹಿಸಿ 2 ವರ್ಷ ಗತಿಸಿದರೂ ಸ್ವತಃ ಈ ಪ್ರಕರಣದ ಬಗ್ಗೆೆ ಅವರ ಸೋದರ ಮಾವನವರು ಹೋರಾಟ ನಡೆಸಿದ್ದರೂ ಅವರ ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ..
ಪ್ರಕರಣವನ್ನು ಪೊಲೀಸ್ ಇಲಾಖೆ ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಸಿಐಡಿಗೆ ತನಿಖೆಗೆ ವಹಿಸಲಾಗಿತ್ತು. ತಪ್ಪು ಮಾಡಿದ ಪೊಲೀಸ್ ಇಲಾಖೆಯ ಕೆಲ ಅಧಿಕಾರಿ, ಸಿಬ್ಬಂದಿಗೆ ಮಾತ್ರ ದಂಡ ವಿಧಿಸಲಾಗಿದೆ. ಆದರೆ ಈ ಯುವಕನ ಕಿಡ್ನಿ ತೆಗೆದು ಮಾರಿದವನಿಗೆ ಹಾಗೂ ಬೆಂಗಳೂರಿನ ಆ ಪ್ರತಿಷ್ಠಿತ ಆಸ್ಪತ್ರೆಗೆ ಮಾರಿದವನಿಗೆ, ಶ್ರೀಮಂತರಿಗೆ ಹಣದ ಆಸೆಗೆ ಇವನ ಕಿಡ್ನಿ ತೆಗೆದ ಆಸ್ಪತ್ರೆಗೆ ಯವರಿಗೆ ಇದೂವರೆಗೆ ಯಾವ ಶಿಕ್ಷೆಯೂ ಆಗಿಲ್ಲ. ಈ ಬಗ್ಗೆೆ ಇತ್ತೀಚೆಗೆ ರಾಜ್ಯ ಮಟ್ಟದ ಖಾಸಗಿ ಸುದ್ದಿ ವಾಹಿನಿಯಲ್ಲಿ ವರದಿಯೂ ಪ್ರಸಾರವಾಗಿದೆ. ಹಾಗಾಗಿ ಕುಟುಂಬದವರಿಗೆ ಹಾಗೂ ಸಮಸ್ತ ಹೂಗಾರ ಸಮಾಜದವರಿಗೆ
ಸಿಐಡಿ ತನಿಖೆ ತೃಪ್ತಿಕರವಾಗಿಲ್ಲ. ಈ ಪ್ರಕರಣದ ಹಿಂದೆ ಕಾಣದ ಕೈಗಳು ಇರುವ ಅನುಮಾನವಿದೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತೇವೆ.
ನಮ್ಮ ಸಮಾಜದ ಯುವಕನನ್ನು ಬಲಿ ಪಡೆದವರಿಗೆ ಶಿಕ್ಷೆಯಾಗಬೇಕು. ಸಾವಿನಲ್ಲೂ ಸ್ವಾರ್ಥ, ರಾಜಕೀಯ ಮಾಡದೆ ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರು ನಮ್ಮವರೇ ಆಗಿದ್ದರೂ ಅಂಥವರ ಬಂಡವಾಳವೂ ಬಯಲಾಗಬೇಕು ಎಂದು ಮನವಿ ಮಾಡಿದರು.