ಕನ್ನಡದ ನಟಿ ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಹೈದರಾಬಾದ್ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ
ಸಂಬಂಧಿಸಿದಂತೆ ಅವರ ಸಂಬಂಧಿ ವಿಜಯ್ ಎನ್ನುವವರು ಶಾಕಿಂಗ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಹೇಸಿದ ವಿಜಯ್, ಶೋಭಿತಾ ಶಿವಣ್ಣ ಆತ್ಮಹತ್ಯೆ ಕುರಿತು ಅವರ ಗಂಡ ಸುಧೀರ್ ಗೂ ಗೊತ್ತಿರಲಿಲ್ಲ. ಅವರೇ ಹೋಗಿ ಬಾಗಿಲು ಮುರಿದು ನೋಡಿದಾಗ ಫುಲ್ ಶಾಕ್ ಆಗಿದ್ದರು. ರೂಮ್ ಒಳಗೆ ಶೋಭಿತಾ ಅವರು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೋಭಿತಾ ಸಾವಿನ ಬಗ್ಗೆ ಸುಧೀರ್ ಗೂ ಕಾರಣವೇನು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.