ಶ್ರೀ ಲಕ್ಷ್ಮಣ ನಿಂಬರಗಿ, IPS ಪೊಲೀಸ್ ಅಧೀಕ್ಷಕರು ಸಹಯೋಗದಲ್ಲಿ
ವಿಜಯಪುರ ಜಿಲ್ಲೆಯಾದ್ಯಂತ ಚಟುವಟಿಕೆಯಲ್ಲಿರುವ ಪ್ರಮುಖ ರೌಡಿ ಶೀಟರ್ಗಳ ತಪಾಸಣೆ ಕೈಕೊಂಡು ಪರಿಶೀಲಿಸಲಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆದರಿಸುವ, ಭಯಪಡಿಸುವ ಹಾಗೂ ಚಟುವಟಿಕೆಯಲ್ಲಿರುವ ಪ್ರಮುಖ 172 ಜನ ರೌಡಿ ಶೀಟರ್ಗಳ ತಪಾಸಣೆ ಕಾರ್ಯಾಚರಣೆ ಕೈಕೊಳ್ಳಲಾಗಿದೆ.
ಅದರಲ್ಲಿ ಬೇರೆಯವರ ಹೆಸರಿನಲ್ಲಿದ್ದ ವಾಹನಗಳನ್ನು, ಸಾಲ ಕೊಟ್ಟ ಹಣಕ್ಕಾಗಿ, ಅನಧೀಕೃತವಾಗಿ ಇಟ್ಟುಕೊಂಡ 06 ಜನ, ಹಣಕಾಸಿನ ವ್ಯವಹಾರದಲ್ಲಿ ಬೇರೆಯವರ ಹೆಸರಿನಲ್ಲಿದ್ದ ಚೆಕ್, ಬಾಂಡ್ ಪೇಪರ್ ಹಾಗೂ ಇತರೆ ದಾಖಲಾತಿಗಳನ್ನು ಹೆದರಿಸಿ ಇಟ್ಟುಕೊಂಡಿದ್ದ 06 ಜನ ಸೇರಿದಂತೆ ಇನ್ನೂಳಿದ ಜನರ ಮೇಲೆ ಒಟ್ಟು 21 ಪಿಎಆರ್
ದಾಖಲಿಸಲಾಗಿದೆ. ಅಲ್ಲದೇ 02 ರೌಡಿ ಶೀಟರ್ಗಳು ಈ ಹಿಂದೆ FIR ದಾಖಲಾಗಿ, ಮಾನ್ಯ ನ್ಯಾಯಾಲಯದಿಂದ ವಾರಂಟ್ ಹೊರಡಿಸಿದ್ದರೂ ಸಹ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದವರನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 04 ರೌಡಿ ಜನರನ್ನು ಆಕ್ರಮ ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ 02 FIR ಗಳನ್ನು ದಾಖಲಿಸಲಾಗಿದೆ.