ಹಣ ವಸೂಲಿಗಿಳಿದ ಬಿ.ಇಡ ಖಾಸಗಿ ಶಿಕ್ಷಣ ಸಂಸ್ಥೆಗಳ ಅವ್ಯವಹಾರಗಳನ್ನು ವಿರೋಧಿಸಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಮಾಡಲಾಯಿತು.
ವಿಜಯಪುರ 13 ಡಿಸೇಂಬರ್ : ವಿಜಯಪುರ ನಗರ ಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರಿಗೆ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲೆಯಲ್ಲಿ ಸರ್ಕಾರಿ B.ed ಕಾಲೇಜ್ ಗಳಿಲ್ಲ ಈಗಿರುವ ಖಾಸಗಿ B. ed ಶಿಕ್ಷಣ ಸಂಸ್ಥೆಗಳು ಮನಬಂದಂತೆ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಅಕ್ಷಯ ಕುಮಾರ್ ಮತ್ತು ಮಾದೇಶ ಚಲವಾದಿ ಯವರು ಮಾತನಾಡಿ ನಮ್ಮ ಜೊಲ್ಲೆಯಲ್ಲಿ ಪ್ರತಿ ವರ್ಷ 20 ರಿಂದ 30 ಸಾವಿರ ವಿದ್ಯಾರ್ಥಿಗಳು ಪದವಿ ಮೂಗಿಸಿ ತೆರಗಡೆ ಹೊಂದುತ್ತಾರೆ, ಅದರಲ್ಲಿ ಅರ್ಧ ಭಾಗದಷ್ಟು ಜನ B.ed ಮಾಡಬೇಕೆಂದು ಎಡ್ಮಿಷನ್ ತೊಗೊಳಲು ಹೋದರೆ 2 ರಿಂದ 3 ಲಕ್ಷ ರೊಪಾಯಿ ವಸೂಲಿ ಮಾಡುತ್ತಿದ್ದಾರೆ.
ಇದರಿಂದ ಬಡ ಕುಟುಂಬದಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಇಷ್ಟೊಂದು ಹಣ ಕೊಡೋಕ್ಕಾಗದೆ ತಮ್ಮ ಶಿಕ್ಷಣವನ್ನೇ ಕುಂಟಿತಗೊಳಿಸಿ ಕೂಲಿ ನಾಲಿಮಾಡುವಂತಹ ಪ್ರವೃತ್ತಿ ಬೆಳಿಯುವಂತಾಗಿದೆ, ಇನ್ನೂ ನಾನು ಕಲಿಯಲೇ ಬೇಕು ಎನ್ನುವ ಎಷ್ಟೋ ಜನ ವಿದ್ಯಾರ್ಥಿಗಳು ಸಾಲ ಸುಲ ಮಾಡಿ, ಮನೆಯಲ್ಲಿರುವ ತಾಯಿಗಳ ವಡವೆ ಮಾರಿ ಕಲಿಯುವಂತಹ ಕೆಲಸವಾಗುತ್ತಿದೆ.
ತಾವು ಮನಸ್ಸು ಮಾಡಿ ಸರ್ಕಾರಿ B.ed ಕಾಲೇಜ್ ಮಂಜೂರು ಮಾಡಿದರೆ ಹಣ ವಸೂಲಿ ಮಾಡುತ್ತಿರುವ B.ed ಕಾಲೇಜುಗಳ ಹಾವಳಿ ಕಡಿಮೆ ಯಾಗುತ್ತವೆ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ನಾನು ಶಿಕ್ಷಕ ನಾಗಿ ಸೇವೆ ಸಲ್ಲಿಸಬೇಕೆನ್ನುವ ಕನಸು ಕಟ್ಟಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಅನುಕೂಲ ವಾಗುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಸಂದೇಶ್ ಕುಮುಟಗಿ, ಯಾಷಿನ್ ಇನಾಮಧಾರ, ಆಶೀಪ್, ಲೂಲ್ಲು ಮುಲ್ಲಾ, ಮುಂತಾದವರು ಭಾಗಿಯಾಗಿದ್ದರು.