ಸಿಂದಗಿ ತಾಲೂಕಿನ ಬಂಕಲಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯ ವದಗಿಸುವಂತೆ ಜಿಲ್ಲಾ ಪಂಚಾಯತ್ CEO ರವರಿಗೆ DVP ಯಿಂದ ಮನವಿ :
ವಿಜಯಪುರ ಡಿಸೇಂಬರ್ 16 ಸಿಂದಗಿ ತಾಲೂಗಿನ ಯರಗಲ ಬಿ. ಕೆ ಗ್ರಾಮ ಪಂಚಾಯಿತಿ ಅಧೀನಲ್ಲಿ ಬರುವ ಬಂಕಲಗಿ ಗ್ರಾಮದ ಎಚ್. ಪಿ. ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯ ವದಗಿಸಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದಲಿತ ವಿದ್ಯಾರ್ಥಿ ಪರಿಷತ್ ಮೂಲಕ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಅಕ್ಷಯ್ ಕುಮಾರ್ ಅಜಮನಿ ಯವರು ಮಾತನಾಡಿ ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದ ಸರ್ಕಾರಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿವೆ.
ಸರ್ಕಾರಗಳು ಮಾತಿನಲ್ಲಿ ಅಷ್ಟೇ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದಿವಿ ಎಂದು ಹೇಳುಹುದಲ್ಲ ಹಿಂದಹ ಗ್ರಾಮ ಮಟ್ಟದಲ್ಲಿ ಇರುವ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ಗಮನಹರಿಸಬೇಕು.
ವಿಜಯಪುರ ಜಿಲ್ಲೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳಿಯುತ್ತಿಗೆ, ಶ್ರೀಮಂತರಿಗೆ ಶಿಕ್ಷಣ ಸಿಗುವಂತಹ ವಾತಾವರಣ ನಿರ್ಮಾಣವಾಗಿದೆ.
ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಗ್ರಾಮ ಮಟ್ಟದಲ್ಲಿರುವ ಶಾಲೆಗಳ ಉಳವಿಗಾಗಿ ಅಭಿಯಾನಗಳನ್ನು ಪ್ರಾರಂಬಿಸಿ ಗ್ರಾಮ ಮಟ್ಟದ ಶಿಕ್ಷಣಕ್ಕೆ ವತ್ತು ನೀಡಿದಾಗ ಮಾತ್ರ ಈ ಜಿಲ್ಲೆ ಶೈಕ್ಷಣಿಕ ಜಿಲ್ಲೆಯಾಗಿ ಕಾಣಲು ಸಾಧ್ಯ ಎಂದರು.
ಮನವಿ ಮಾಡುವಾಗ ಹುಚ್ಚಪ್ಪ ಭಾವಿಮಾನಿ, ಸಂದೇಶ್ ಕುಮುಟಗಿ, ಯಾಷಿನ್ ಇನಾಮದಾರ್, ಯಮನೂರಿ ಸಿಂದಗಿರಿ ಮುಂದಾದವರು ಭಾಗಿಯಾಗಿದ್ದರು.