ಸಂವಿಧಾನದ 4 ನೇ ಸ್ತಂಭ ಎಂದು ಬಿರುದು ಹೊತ್ತಿರುವ ಕರ್ನಾಟಕದ ಪತ್ರಕರ್ತರು ಹಾಗೂ ಮಾಧ್ಯಮ ಟಿವಿ ರಿಪೋರ್ಟರ್
ಮೂಲಬೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಹೌದು ಹಗಲಿರುಳು ಎನ್ನದೆ ನಾಡಿನ ಜನರನ್ನು ಜಾಗೃತ ಮೂಡಿಸುವ ಸಲುವಾಗಿ ಕಷ್ಟಪಟ್ಟು ಸುದ್ದಿಯನ್ನು ಸಂಗ್ರಹಮಾಡಿ ನಾಡಿನಲ್ಲಿ ಎಲ್ಲೇ ಅನ್ಯಾಯ ವಾದರೂ ಮುಂದೆ ಹೋಗಿ ಅವರ ಅಳಿಲನ್ನು ಕೇಳಿ ಯಾರಿಗೂ ಅಂಜದೆ ಸಧಾ ಸತ್ಯವನ್ನೆ ಬರೆಯುತ್ತಿರುವ ಕರ್ನಾಟಕದ ಪತ್ರಕರ್ತರು ಅಸಾಮಾನ್ಯ ಸಾಧಕರು. ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚಳಿಗಾಲದ ಅಧಿವೇಶನ ತಮ್ಮ ಹಕ್ಕಿಗಾಗಿ ಎಲ್ಲಾ ಪತ್ರಕರ್ತರು ಪ್ರತಿಭಟನೆ ನಡೆಸಿದರು
ಈ ಪ್ರತಿಭಟನೆಯ ಕುರಿತು ಮಾತನಾಡಿದ ರಾಜ್ಯಾಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನ
ಮಾನ್ಯ ಸಿದ್ದರಾಮಯ್ಯ ಜೀ ಮುಖ್ಯಮಂತ್ರಿಗಳು
ಸಾಮಾಜಿಕ ಹರಿಹಾರರೆಂಬ ಬಿರುದು ಪಡೆದಿರುವ ತಾವುಗಳು ನಾಡಿನ ಎರೆಡುವರೆ ಕೋಟಿ ಮಹಿಳೆಯರಿಗೆ ವಾರ್ಷಿಕ 1800 ಕೋಟಿ ರೂಗಳ ವೆಚ್ಚದಲ್ಲಿ ಅದು ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು ಎಂಬ ಮಾನದಂಡದೊಂದಿಗೆ ರಾಜ್ಯಾಧ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಕರ್ಯ ಒದಗಿಸಿರುವ ತಾವುಗಳು ನಾಡಿನ ಕೇವಲ 10 ಸಾವಿರ ಗ್ರಾಮೀಣ ಪತ್ರಕರ್ತರು ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿ ಪ್ರಯಾಣಿಸಲು ತಮ್ಮ ಸರ್ಕಾರ ಕರಾಳ ಆದೇಶದ ಮಾನದಂಡಗಳಾದ ಪತ್ರಕರ್ತರು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಜೊತೆಗೆ ನಾಲ್ಕು ವರ್ಷದ ಖಾಯಂ ನೇಮಾಕಾತಿ ಆದೇಶ ಪತ್ರ ಹೊಂದಿರಲೇಬೇಕೆಂಬ ನಿಯಮ ವಿಧಿಸಿರುವುದು ಎಷ್ಟು ಸಮಂಜಸ, ಪತ್ರಕರ್ತರಿಗೆ ಮಾನದಂಡಗಳಾದ ಆರ್.ಎನ್.ಐ. ಪ್ರತಿ, ಸಂಪಾದಕರು ನೀಡುವ ಗುರುತಿನ ಪತ್ರ ಹಾಗೂ ಪತ್ರಿಕೆಯ ಸಂಚಿಕೆ ಪ್ರತಿಗಳು ಹೊಂದಿದ್ದರೆ ಸಾಕಾಗಿತ್ತು ಅದೂ ಬಿಟ್ಟು ಸೌಕರ್ಯ ಕೊಡಬಾರದೆಂಬ ದೃಷ್ಟಿಯಿಂದ ಈ ರೀತಿಯ ಬೂಟಾಟಿಕೆ ಮಾಡಿ ಸರ್ಕಾರ ಪತ್ರಕರ್ತರನ್ನು ವಂಚಿಸಿದೆ.
ಸರ್ಕಾರ ವಾರ್ಷಿಕ 30 ಕೋಟಿ ರೂ ಗಳು ವೆಚ್ಚ ಮಾಡಿದರೆ 10 ಸಾವಿರ ಗ್ರಾಮಾಂತರ ಪತ್ರಕರ್ತರು ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಸ್ಪಷ್ಟ ಅವಕಾಶವಿದ್ದರೂ ಪತ್ರಕರ್ತರಿಗೆ ಸೌಲಭ್ಯ ವಂಚಿತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದಲೇ ಈ ಕಠಿಣ ನಿಯಮಗಳನ್ನು ವಿಧಿಸಿರುವ ತಾವುಗಳು ಹೆಣ್ಣು ಮಕ್ಕಳಿಗೆ ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು ಎಂಬ ಸರಳ ನಿಯಮ ವಿಧಿಸಿ ರಾಜ್ಯಾಧ್ಯಂತ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿರುವ ತಾವುಗಳು ಸಮಾಜ ಮುಖ ಹಾಗೂ ಸರ್ಕಾರ ಸಾರ್ವಜನಿಕರ ಮಧ್ಯ ಸೇತುವೆಯಾಗಿ ಕಾರ್ಯನಿರ್ವಹಿಸುವ ಸಂವಿಧಾನದ ನಾಲ್ಕನೇ ಅಂಗ ವೆಂದು ಬಾಷಣದಲ್ಲಿ ಬಡಬಡಿಸುವ ತಾವುಗಳು ಈ ರೀತಿಯ ಆದೇಶದಿಂದ ಸಾಮಾಜಿಕ ನ್ಯಾಯ ನಾಡಿನ ಗ್ರಾಮಾಂತರ ಪತ್ರಕರ್ತರಿಗೆ ಒದಗಿಸಿದ್ದೀರಾ ನಾಡಿನ ಪ್ರಭು ಸಿದ್ದರಾಮಯ್ಯನವರೇ? ಎಂದರು