ಮಂಗಳೂರು: ಸೋಲಾಪುರದ ಈರುಳ್ಳಿ ವ್ಯಾಪಾರಿಯೋರ್ವ ಮಂಗಳೂರಿನ ವ್ಯಾಪಾರಿಗೆ 75 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಅಬ್ದುಲ್ ರಹಿಮಾನ್ ಬಾವಾ ವಂಚನೆಗೊಳಗಾದವರು. ಅವರಿಗೆ ಕೃಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ 2021ರಲ್ಲಿ ಮಂಗಳೂರು ಮತ್ತು ಚೆನ್ನೈಯಲ್ಲಿ ಈರುಳ್ಳಿ ವ್ಯಾಪಾರ ಮಾಡುವ ಮಹಾರಾಷ್ಟ್ರ ಸೋಲಾಪುರದ ಕುಂಡಲಿಕ್ ಜುಂಬಾರ್ ಖಂಡಾಗಲೆ ಎಂಬಾತನ ಪರಿಚಯವಾಗಿ ಆತ್ಮೀಯರಾಗಿದ್ದರು.
ಅನಂತರ ಕುಂಡಲಿಕ್ ಜುಂಬಾರ್ ಖಂಡಾಗಲೆ ವ್ಯವಹಾರದಲ್ಲಿ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಅಬ್ದುಲ್ ರಹಿಮಾನ್ ಬಾವಾ ಅವರಿಂದ 75 ಲ.ರೂ.ಗಳನ್ನು ವರ್ಗಾಯಿಸಿಕೊಂಡು ಅನಂತರ ವಾಪಸ್ ನೀಡದೆ ವಂಚಿಸಿದ್ದಾನೆ ಎಂದು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.