ವಿಜಯಪುರ : ವಿಜಯಪುರ ಗ್ರಾಮೀಣ ಪೊಲೀಸರು ವಿಜಯಪುರದ ಸಿಂದಗಿ ನಾಕಾದಲ್ಲಿ ಹತ್ತಿರ ಮೋಟಾರ ಸೈಕಲ ನಂಬರ 28/ಇಡಿ-8471 ನೇದ್ದರ ಮೇಲೆ ವಿಜಯಪೂರದ ಕಡೆಗೆ ಹೊರಟಿದ್ದ ಆರೋಪಿತನ ಮೇಲೆ ಸಂಶಯಪಟ್ಟು ಕೂಡಲೆ ಪೊಲೀಸ ಸಿಬ್ಬಂದಿ ಜನರು ಸದರಿ ಮೋಟಾರ ಸೈಕಲಗೆ ಅಡ್ಡ ಹಾಕಿ ಹಿಡಿದಿದ್ದು, ಸದರಿಯವನಿಗೆ ವಿಚಾರಣೆಗೆ ಒಳಪಡಿಸಿ ಅವನ ಹತ್ತಿರದಲ್ಲಿದ್ದ ಮೋಟಾರ ಸೈಕಲ ಬಗ್ಗೆ ವಿಚಾರಿಸಿದಾಗ ತಾನು ಕೆಲಸ ಮಾಡುವ ಜುಮನಾಳ ಗ್ರಾಮದ ಶರನಗೌಡ ಬಿರಾದಾರ ಇವರ ವೃದ್ಧಾಶ್ರಮದಿಂದಾ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದು ಇರುತ್ತದೆ.
ಆರೋಪಿತನಾದ ದೇವೇಂದ್ರ ತಂದೆ ನಿಂಗಪ್ಪ ಹದಗಲ ವಯಾ 24 ವರ್ಷ ಸಾ॥ ಮಾದನಗೆರಿ ತಾ॥ ಯಡ್ರಾಮಿ ಜಿ ಕಲಬುರ್ಗಿ ಇತನನ್ನು ದಸ್ತಗೀರ ಮಾಡಿ ಅವನ ಹತ್ತಿರಲ್ಲಿದ್ದ ಮೋಟರ ಸೈಕಲ್ಗಳು 1)ಬಜಾಜ್ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-28/ಎಚ್.ಡಿ-1345 ನೇದ್ದು. ಅಂದಾಜು ಕಿಮ್ಮತ್ತ 45000/ ರೂ ಆಗಬಹುದು. ಮತ್ತು ಕಳ್ಳತನ ಮಾಡಿ ತನ್ನ ಪರಿಚಿತನ ಮನೆಯಲ್ಲಿಟ್ಟಿದ್ದ. ಇನ್ನೊಂದು ಮೋಟಾರ ಸೈಕಲ್ 2)ಎಚ್.ಎಪ್ ಡಿಲ್ಕ್ಷ ಕಂನಿಯ ಮೋಟಾರ ಸೈಕಲ ನಂಬರ 28/ಇಡಿ-8471 ನೇದ್ದು, ಅಂದಾಜ ಕಿಮ್ಮತ್ತ 40000/ ರೂ ಎರಡು ಮೋಟಾರ ಸೈಕಲಗಳ ಒಟ್ಟು ಕಿಮ್ಮತ್ತ 85000/ರೂ ಆಗುತ್ತದೆ. ಹಾಗು ಕಳ್ಳತನ ಮಾಡಿಕೊಂಡು ತನ್ನ ಹತ್ತಿರ ಇಟ್ಟುಕೊಂಡ 37 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಅಂದಾಜು ಮೌಲ್ಯ 1,90,000/- ಇರುತ್ತದೆ.
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಪೊಲೀಸ್ ಅಧೀಕ್ಷಕರು ವಿಜಯಪುರ ರವರ ಮಾರ್ಗದರ್ಶನದಲ್ಲಿ, ಕಾರ್ಯನಿರ್ವಹಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ, -2(ಅಪರಾಧ) ಡಿ.ಎಸ್.ಪಿ ವಿಜಯಪುರ ಗ್ರಾಮಾಂತರ ಉಪವಿಭಾಗ ಹಾಗೂ ಆರ್.ಎಸ್ ಜಾನಾರ ಪೊಲೀಸ್ ಇನ್ಸಪೆಕ್ಟರ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ, ನೇತ್ರತ್ವವಹಿಸಿದ ಆರ್.ಎ.ದಿನ್ನಿ ಮ.ಪಿಸ್.ಐ (ಅವಿ). ಸಿಬ್ಬಂಧಿಯವರಾದ, ಎಮ್.ಎಮ್ ಉಜನಿ. ಸಂಜಯಕುಮಾರ ಪೂಜಾರಿ, ಶ್ರೀಶೈಲ ತೆಲಗಾಂವ, ಆಯ್.ವಾಯ್. ದಳವಾಯಿ, ಸುನೀಲ ರಾಠೋಡ, ಸಂತೋಷ ನಾಯಕ, ಅಲ್ಲಾಪಟೇಲ ಬಿರಾದಾರ ರವರುಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.