ವಿಜಯಪುರ : ಸಚಿವ ಎಂ ಬಿ ಪಾಟೀಲ್ ಈ ಹಿಂದೆ ನೀರಾವರಿ ಸಚಿವರಿದ್ದಾಗ ತಮ್ಮ ಕ್ಷೇತ್ರದಲ್ಲಿ ಮಾಡಿದ ನೀರಾವರಿ ಅಭಿವೃದ್ದಿ ಕಾಮಗಾರಿಗಳಿಂದ ರತರು ಫುಲ್ ಖುಷ್ ಆಗಿದ್ದಾರೆ.
ಬೇಸಿಗೆ ಸಮಯದಲ್ಲಿ ಕುಡಿಯಲು ನೀರಿಗಾಗಿ ಪರದಾಡುವಂತಹ ಸ್ಥಿತಿ ಹಿಂದೆ ಇತ್ತು ಆದರೆ, ಸಚಿವ ಎಂ ಬಿ ಪಾಟೀಲ್ ಈ ಹಿಂದೆ ನೀರಾವರಿ ಸಚಿವರಿದ್ದಾಗ ತಮ್ಮ ಕ್ಷೇತ್ರದಲ್ಲಿ ಮಾಡಿದ ನೀರಾವರಿ ಅಭಿವೃದ್ದಿ ಕಾಮಗಾರಿಗಳಿಂದ ಬೇಸಿಗೆ ಕಾಲದಲ್ಲೂ ರೈತರಿಗೆ ಬೇಳೆಗಳಿಗೆ ನೀರು ಸಿಗ್ತಾ ಇದ್ದು, ಇದರಿಂದ ರೈತರೊಬ್ಬರು ಸಂತಸ ವ್ಯಕ್ತ ಪಡಿಸಿದ್ದಾರೆ.
ತಿಕೋಟಾ ಪಟ್ಟಣದ ಪ್ರಗತಿಪರ ರೈತರಾದ ಬುಳ್ಳಪ್ಪ ಪೂಜಾರಿ ಅವರು ಸಚಿವ ಎಂ ಬೀ ಪಾಟೀಲ್ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಸಚಿವ ಎಂ ಬೀ ಪಾಟೀಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ಬರೆದು ಕೊಂಡಿದ್ದಾರೆ.ಅಭಿಮಾನದ ಮಾತುಗಳನ್ನು ಕೇಳುತ್ತಿದ್ದರೆ ಜನಪ್ರತಿನಿಧಿಯಾಗಿ ನಾನು ಕೈಗೊಂಡಿದ್ದ ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಮ್ಮ ರೈತರನ್ನು ತಲುಪುತ್ತಿದ್ದು, ಅವರ ಬದುಕು ಹಸನಾಗುತ್ತಿರುವುದು ಸ್ಪಷ್ಟವಾಗಿದೆ. ಅವರ ಸಂತಸದ ಮಾತುಗಳಿಗೆ ಆಭಾರಿಯಾಗಿರುವೆ. ಬುಳ್ಳಪ್ಪ ಪೂಜಾರಿ ಅವರ ಯಶೋಗಾಥೆ ಉಳಿದ ಹಲವರಿಗೆ ಪ್ರೇರಣೆಯಾಗಲಿದೆ. ಸರ್ವಾಂಗೀಣ ಅಭಿವೃದ್ಧಿಯ ಮುಂದುವರೆಯಲಿದೆ.