ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಬಂಧನವಾಗಿದೆ. ಆರ್ ಟಿ ನಗರ ಪೊಲೀಸರಿಂದ ಮೂವರು ಬೈಕ್ ಕಳ್ಳರನ್ನು ಅರೆಸ್ಟ್ ಮಾಡಿ ಲಕ್ಷಾಂತರ ಬೆಲೆ ಬಾಳುವ ಬೈಕ್ʼಗಳನ್ನ ವಶಮಾಡಿಕೊಂಡಿದ್ದಾರೆ. ಪೊಲೀಸರಿಂದ ಮೂವರು ಆರೋಪಿಗಳಾದ ಆಲಿ, ಮುಬಾರಕ್, ನಿರಂಜನ್ ಬಂಧಿಸಿ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಬೈಕ್ ಕಳ್ಳತನ ಅಷ್ಟೇ ಅಲ್ಲದೇ ಸರಗಳ್ಳತನ ಕೂಡ ಮಾಡುತ್ತಿದ್ದ ಈ ಗ್ಯಾಂಗ್.
ಹಾಗೆ ಇವರಿಂದ 72 ಚಿನ್ನದ ಸರಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ನಗರದ ಆರ್ ಟಿ ನಗರ, ಜೆಸಿ ನಗರ, ಪುಲಕೇಶಿನಗರ, ಬಾಗಲೂರು, ಉಪ್ಪಾರಪೇಟೆ , ಹಲಸೂರು ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಈ ಆರೋಪಿಗಳು ಈ ಹಿಂದೆ ಕೊಲೆ, ಕೊಲೆಯತ್ನ ಪ್ರಕರಣದಲ್ಲೂ ಕೂಡ ಭಾಗಿಯಾಗಿದ್ದರು.ಪ್ರಕರಣ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.