ವಿಜಯಪುರ: ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಜನತಾ ಟ್ರಾವೆಲ್ಸ್ಗೆ ಸೇರಿದ ಬಸ್ಸಿನ ಟೈಯರ್ ಬ್ಲಾಸ್ಟ್ ಆಗಿ ಏಕಾಏಕಿ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ನಗರದ ಹತ್ತಿರ ಹಿಟ್ಟಿನಲ್ಲಿ ಗ್ರಾಮದ ಬಳಿ ನಡೆದಿದೆ,
ಟೈಯರ್ ಬ್ಲಾಸ್ಟ್ ಆಗುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗೆ ಇಳಿದು ಸೇಫ್ ಆಗಿದ್ದಾರೆ. ಆದರೆ, ಪ್ರಯಾಣಿಕರ ಲಗೇಜ್ ಗಳು ಸುತ್ತು ಭಸ್ಮ ವಾಗಿವೆ, ಬೆಳೆ ಬಾಳುವ ವಸ್ತುಗಳು ಕೂಡ ಭಸ್ಮವಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಿಂದಿಸಿದ್ದಾರೆ, ಆದರೆ ಸಂಪೂರ್ಣ ಬಸ್ ಸುತ್ತು ಭಸ್ಮ ವಾಗಿದೆ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ.