ವಿಜಯಪುರ: ದೇಶದಲ್ಲಿ ಕೊರೋನಾ ವೈರಸ್ ನ ಹೊಸ ರೂಪಾಂತರ JN 1 ವೈರಸ್ ಪತ್ತೆಯಾಗಿದೆ ಎಂದು ವಿಜಯಪುರ ಜಿಲ್ಲಾ ಅಧಿಕಾರಿ T, ಭೂಬಾಲನ ವಿಜಯಪುರ ನಗರದಲ್ಲಿ ನಡೆದ ಸುದ್ದಿ ಘೋಷ್ಠಿಯಲ್ಲಿ ಹೇಳಿದರು.
ಮತ್ತೆ ನಮ್ಮ ದೇಶದಲ್ಲಿ ಕೋರೋನ ಕೇಸ್ ಗಳು ಪತ್ತೆಯಾಗುತ್ತಿವೆ. ಆದರೆ ಈ ಬಾರಿ ಕೊರೋನಾ ವೈರಸ್ ನ ಹೊಸ ರೂಪಾಂತರ JN1 ವೈರಸ್ ಪತ್ತೆಯಾಗಿದೆ. ಅಲ್ಲದೆ ದೇಶದಲ್ಲಿಯೆ ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ಕೇಸ್ ಗಳು ದಾಖಲಾಗಿವೆ, ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ, ಇದಕ್ಕಾಗಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಅದೇ ರೀತಿ ಸಾರ್ವಜನಿಕರು ಕೂಡ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.