ಕಳೆದ 03 ತಿಂಗಳಿಂದ 1) ಡಿಜಿಟಲ್ ಅರೆಸ್ಟ್ 2) ಕ್ರಿಷ್ಟೋ ಟ್ರೇಡಿಂಗ್ 3) ಪಾರ್ಟ್ ಟೈಮ್ ಜಾಬ್ 4) ಷೇರ್ ಮಾರ್ಕೇಟ್ ಟ್ರೇಡಿಂಗ್, ನಂತಹ ವಿವಿಧ ರೀತಿಯಲ್ಲಿ ಆನ್ಲೈನ್ ವಂಚನೆಗೊಳಗಾದವರು ನಮಗೆ ಜಿಲ್ಲೆಯ ಸಿ.ಇ.ಎನ್ ಕೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಒಟ್ಟು 12 ಸೈಬರ್ ಅಪರಾಧ ಪ್ರಕರಣಗಳು (ಆನ್ಲೈನ್/ಆರ್ಥಿಕ ವಂಚನೆ) ದಾಖಲಾಗಿದ್ದವು
ಪ್ರಕರಣಗಳ ತನಿಖೆ ಕುರಿತು ವಿಜಯಪುರ ಜಿಲ್ಲಾ SP ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ವಿಜಯಪುರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ, ಅವರ ಮಾರ್ಗದರ್ಶನದಲ್ಲಿ, ಸುನೀಲ ಕಾಂಬಳೆ, D S P, ರಮೇಶ ಅವಜಿ, ಪೊಲೀಸ್ ಇನ್ಸ್ಪೆಕ್ಟರ್, ಸಿಇಎನ್ ಕ್ರೈಂ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜನರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ಯಶಸ್ವಿಯಾಗಿ ಈ ಕೆಳಕಂಡ ಪ್ರಕರಣಗಳ ಪತ್ತೆ ಕಾರ್ಯಾಚರಣೆ ನಡೆಸಿ
ಸಿಇಎನ್ ಕೈಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 53/2024 ಕಲಂ: 66(ಸಿ), 66(ಡಿ) ಐಟಿ ಆಕ್ಟ್ -2008 & 308(7), 318(4), 319(2) ಬಿಎನ್ಎಸ್-2023 ನೇ ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಮಾದರಿಯಲ್ಲಿ ವಿಜಯಪುರದ ಸೃಷ್ಟಿ ಕಾಲೋನಿಯ ನಿವಾಸಿ ಶೈಲಜಾ ತಂದೆ ಶಿವಲಿಂಗಸ್ವಾಮಿ ಮುತ್ತಿನಪೆಂಡಿಮಠ, ಪ್ರಾಧ್ಯಾಪಕರು, ಇವರಿಗೆ 38 ಲಕ್ಷ ರೂ. ಗಳ ವಂಚನೆ ಮಾಡಿದ್ದು, ಈ ಪ್ರಕರಣದಲ್ಲಿ ಕೃತ್ಯ ಎಸಗಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ. ಒಟ್ಟು 31,52,581/- ರೂ. ಗಳನ್ನು ಪಿರ್ಯಾದಿಗೆ ಮರಳಿ ಕೊಡಿಸಿದ್ದು, ಇನ್ನೂಳಿದ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ
ಸಿಇಎನ್ ಕೈಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 38/2024 ಕಲಂ: 66(ಸಿ), 66(ಡಿ) ಐಟಿ ಆಕ್ಟ್ -2008 & 419, 420 ಐಪಿಸಿ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ನಿವಾಸಿ ರಾಜಕನ್ಯಾ ತಂದೆ ಬಸವರಾಜ ಕೊಂಗಂಡಿ, ಇವರಿಗೆ Capitalix ಎಂಬ ಟ್ರೇಡಿಂಗ್ ಅಪ್ಲಿಕೇಶನದಲ್ಲಿ ಹಣ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಹಣವನ್ನು ಯು.ಎಸ್. ಡಾಲರ್ಗೆ ಕನ್ವರ್ಟ್ ಮಾಡಿ ಅಂತರಾಷ್ಟ್ರೀಯ ಮಟ್ಟದ ಡಾಲರ್. ಗೋಲ್ಡ್, ಕ್ರೂಡ್ ಆಯಿಲ್, ಕರೇನ್ಸಿ ಪೇರ್, ಬಿಟ್ ಕಾಯಿನ್, ಟ್ರೇಡ್ ಮಾಡಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಪ್ರತಿಶತ 30% ಲಾಭಾಂಶ ಮಾಡಿಕೊಡುತ್ತೇವೆ ಅಂತಾ ಸುಳ್ಳು ಹೇಳಿ ನಂಬಿಸಿ, ಇವರ ಕಡೆಯಿಂದ 87 ಲಕ್ಷ ಹಣವನ್ನು ಹಾಕಿಸಿಕೊಂಡು ಟ್ರೇಡಿಂಗ್ ಹೆಸರಿನಲ್ಲಿ ಆನ್ಲೈನ್ ಮೂಲಕ ವಂಚನೆ ಮಾಡಿದ್ದು, ಸದರಿ ಕೃತ್ಯ ಎಸಗಿದ ಆರೋಪಿತರಿಗೆ ಪತ್ತೆ ಮಾಡಿ ವಿಚಾರಣೆ ಕುರಿತು ಹಾಜರಾಗಲು ನೋಟೀಸ್ ಜಾರಿ ಮಾಡಿ, ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು 68,25,710/- ರೂ. ಗಳನ್ನು ಪಿರ್ಯಾದಿಗೆ ಮರಳಿ ಕೊಡಿಸಿದ್ದು, ಇನ್ನೂಳಿದ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿರುತ್ತದೆ.
ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿಗೆ Trade Bulls ಎಂಬ Share Trading App ದಲ್ಲಿ ಮಾರ್ಕೆಟ್ ಬೆಲೆಗಿಂತ ಕಡಿಮೆ ದರದಲ್ಲಿ ಶೇರ್ಗಳನ್ನು ನೀಡುವುದಾಗಿ ನಂಬಿಸಿ, ಇವರ ಕಡೆಯಿಂದ 1 ಕೋಟಿ ಹಣ ಹಾಕಿಸಿಕೊಂಡು ಶೇರ್ ಮಾರ್ಕೇಟ್ ಹೆಸರಿನಲ್ಲಿ ಆನ್ಲೈನ್ ಮೂಲಕ ವಂಚನೆ ಮಾಡಿದ್ದು, ಈ ಪ್ರಕರಣದಲ್ಲಿ ಕೃತ್ಯ ಎಸಗಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು 9,97,762/- ರೂ. ಗಳನ್ನು ಪಿರ್ಯಾದಿಗೆ ಮರಳಿ ಕೊಡಿಸಿದ್ದು, ಇನ್ನೂಳಿದ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿರುತ್ತದೆ.
* ಸಿಇಎನ್ ಕೈಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 34/2024 ಕಲಂ: 66(ಸಿ), 66(ಡಿ) ಐಟಿ ಆಕ್ಟ್-2008 & 318(4), 319(2) ಬಿ.ಎನ್.ಎಸ್-2023 ನೇ ಪ್ರಕರಣದಲ್ಲಿ ವಿಜಯಪುರ ನಗರದ ನಿಖಿಲ ಶಿವಾನಂದ ಮೋಜಿ ಇವರಿಗೆ The Octa Trading App ಎಂಬ ಟ್ರೇಡಿಂಗ್ ಅಪ್ಲಿಕೇಶನದಲ್ಲಿ ಹಣ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಹಣವನ್ನು ಯು.ಎಸ್. ಡಾಲರ್ಗೆ ಕನ್ವರ್ಟ್ ಮಾಡಿ ಅಂತರಾಷ್ಟ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೇನ್ಸಿ ಪೇರ್, ಬಿಟ್ ಕಾಯಿನ್, ಟ್ರೇಡ್ ಮಾಡಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ದಿವಸ ಪ್ರತಿಶತ 4% ಲಾಭಾಂಶ ಮಾಡಿಕೊಡುತ್ತೇವೆ ಅಂತಾ ಸುಳ್ಳು ಹೇಳಿ ನಂಬಿಸಿ ಇವರ ಕಡೆಯಿಂದ 2 ಕೋಟಿ ಹಣವನ್ನು ಹಾಕಿಸಿಕೊಂಡು, ಟ್ರೇಡಿಂಗ್ ಹೆಸರಿನಲ್ಲಿ ಆನ್ಲೈನ್ ಮೂಲಕ ವಂಚನೆ ಮಾಡಿದ್ದು, ಸದರಿ ಕೃತ್ಯ ಎಸಗಿದ ಆರೋಪಿತರಿಗೆ ಪತ್ತೆ ಮಾಡಿ ವಿಚಾರಣೆ ಕುರಿತು ಹಾಜರಾಗಲು ನೋಟೀಸ್ ಜಾರಿ ಮಾಡಿ, ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು 38,00,000/- ರೂ. ಗಳನ್ನು ಪಿರ್ಯಾದಿಗೆ ಮರಳಿ ಕೊಡಿಸಿದ್ದು. ಇನ್ನೂಳಿದ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿರುತ್ತದೆ.
ಸಿಇಎನ್ ಕೈಂ ಪೊಲೀಸ್ ಠಾಣೆಯಲ್ಲಿ ಈ ಮೇಲಿನಂತೆ ದಾಖಲಾದ 04 ಪ್ರಮುಖ ಆನ್ಲೈನ್ ವಂಚನೆ ಪ್ರಕರಣಗಳನ್ನು ತನಿಖೆ ಕೈಕೊಂಡು ಮಾನ್ಯ ನ್ಯಾಯಾಲಯದ ಆದೇಶದಂತೆ ಒಟ್ಟು 1,47,76,053/- ರೂ. ಗಳನ್ನು ಪಿರ್ಯಾದಿದಾರರಿಗೆ ಮರಳಿ ಕೊಡಿಸಿದ್ದಾರೆ
ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೋಬೈಲ್ಗಳನ್ನು ಸಿ.ಇ.ಐ.ಆರ್ (C.E.I.R) ಪೊರ್ಟಲ್ ಮೂಲಕ ಅಂದಾಜು 3,44,000/- ಮೌಲ್ಯದ ವಿವಿಧ ಕಂಪನಿಯ ಒಟ್ಟು 20 ಮೋಬೈಲ್ಗಳನ್ನು ಪತ್ತೆ ಮಾಡಲಾಗಿದೆ.

