- ತನ್ನ ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿದ ಪಾಪಿ..!
ಸತೀಶ್ ಮಹಾನಗರವೊಂದರಲ್ಲಿ ಜಾಹೀರಾತು ಕಂಪನಿಯಲ್ಲಿ ಕಲಾಕಾರನಾಗಿ ಕಾರ್ಯನಿರ್ವಹಿಸುತ್ತಿದ್ದ. 40 ವರ್ಷ ವಯಸ್ಸಿನ ಆತ ತನ್ನ ಪತ್ನಿಯೊಡನೆ ವಿವಾಹ ವಿಚ್ಛೇದನ ಪಡೆದು ಏಕಾಂಗಿಯಾಗಿ ಒಂದು ಬೃಹತ್ ಬಹುಮಹಡಿ ಅಪಾರ್ಟ್ವೆುಂಟ್ ಸಮುಚ್ಚಯದಲ್ಲಿ ವಾಸಿಸುತ್ತಿದ್ದ. ಆತ ಆ ಅಪಾರ್ಟ್ವೆುಂಟನ್ನು ತನ್ನ ಹೆಸರಿನಲ್ಲಿ ಬಾಡಿಗೆಗೆ ತೆಗೆದುಕೊಂಡಿರದೆ ಬಾಡಿಗೆಗೆ ಪಡೆದಿದ್ದ ಇನ್ನೊಬ್ಬರ ಹೆಸರಿನಲ್ಲಿ ವಾಸಿಸುತ್ತಿದ್ದ.
ಸತೀಶನ ಜಾಹೀರಾತು ಕಂಪನಿಯಲ್ಲಿಯೇ ಮೀರಾ ಎಂಬ 36 ವ ರ್ಷದ ಮಹಿಳೆ ಕಾಪಿರೈಟರ್ ಎಂದು ಕೆಲಸ ಮಾಡುತ್ತಿದ್ದಳು. ಉತ್ತರ ಪ್ರದೇಶದವಳಾಗಿದ್ದ ಮೀರಾ, ಬಾಲ್ಯ ವಿವಾಹವಾಗಿದ್ದು ಆಕೆಯ ಗಂಡ ಹಲವಾರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದ. ಮೀರಾಳನ್ನು ಅವಳ ಊರಿನಲ್ಲಿ ಯಾರೂ ಮರುಮದುವೆಯಾಗಲು ತಯಾರಾಗದೇ ಇದ್ದ ಕಾರಣ ಆಕೆ ತನ್ನ ಊರನ್ನು ಬಿಟ್ಟು ಕೆಲಸ ಹುಡುಕಿಕೊಂಡು ಮಹಾನಗರಕ್ಕೆ ಬಂದಿದ್ದಳು. ಅವಳ ಮನೆಯಲ್ಲಿ ಅವಳ ವಿಧವಾ ತಾಯಿಯೊಬ್ಬಳೇ ಇದ್ದಳು. ಮೀರಾ ನಗರದ ಪಿಜಿ ಒಂದರಲ್ಲಿ ವಾಸಿಸುತ್ತಿದ್ದಳು.
ಕಾಲಕ್ರಮೇಣ ಸತೀಶ್ ಮತ್ತು ಮೀರಾ ಪರಸ್ಪರ ಪ್ರೇಮಿಸತೊಡಗಿದರು. ಇಬ್ಬರೂ ಮದುವೆಯಾಗಬೇಕೆಂದು ಯೋಚಿಸುತ್ತಿರುವಾಗ ಸತೀಶ್, ‘ನನ್ನ ಮತ್ತು ನಿನ್ನ ಹಿಂದಿನ ಮದುವೆಗಳು ಈಗಾಗಲೇ ದುಃಖದಿಂದ ಪರ್ಯಾವಸಾನವಾಗಿರುವ ಕಾರಣ ನಾವು ಈ ಕೂಡಲೇ ಲಗ್ನವಾಗುವುದು ಬೇಡ. ಒಂದೆರಡು ವರ್ಷ ಸಹಜೀವನ ನಡೆಸಿ ನಮ್ಮಿಬ್ಬರಲ್ಲಿ ಹೊಂದಾಣಿಕೆಯಾದರೆ ಮಾತ್ರ ಮುಂದೆ ಲಗ್ನವಾಗೋಣ’ ಎಂದ. ಮೀರಾ ಇದಕ್ಕೊಪ್ಪಿದಳು. ಕೆಲವೇ ದಿನಗಳ ನಂತರ ಮೀರಾ ಪಿಜಿಯಿಂದ ತನ್ನ ವಸ್ತುಗಳೆನ್ನೆಲ್ಲಾ ಸತೀಶನ ಫ್ಲಾಲಟ್ಗೆ ತಂದು ಅಲ್ಲಿ ಅವನೊಡನೆ ವಾಸಿಸತೊಡಗಿದಳು. ಕಾಲಕ್ರಮೇಣ ಇಬ್ಬರ ನಡುವೆ ಲೈಂಗಿಕ ಸಂಪರ್ಕವೂ ಉಂಟಾಯಿತು. ಮಕ್ಕಳಾಗದಂತೆ ಅವರು ಜಾಗರೂಕತೆ ವಹಿಸಿದ್ದರು.
ಒಂದು ವರ್ಷದ ಸಹಜೀವನದ ನಂತರ ಸತೀಶನಿಗೆ ಮೀರಾ ಬೇಡವಾದಳು. ಆಗ ಆತ ತನ್ನದೇ ಜಾಹೀರಾತು ಕಂಪನಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ 25 ವರ್ಷ ವಯಸ್ಸಿನ ಲೀನಾ ಎನ್ನುವ ಯುವತಿಯ ಮೇಲೆ ಅನುರಕ್ತನಾದ. ಮದುವೆಯಾಗದ ಆ ಯುವತಿಯೊಡನೆ ಸತೀಶ್ ಆಫೀಸಿನಲ್ಲಿ ಲಲ್ಲೆ ಹೊಡೆಯುವುದನ್ನು ಗಮನಿಸಿದ ಮೀರಾ, ಈ ಬಗ್ಗೆ ತಕರಾರು ತೆಗೆದಳು. ‘ನಾವಿಬ್ಬರೂ ಒಂದು ವರ್ಷದ ನಂತರ ಮದುವೆಯಾಗುವುದಾಗಿ ತೀರ್ವನಿಸಿ ಸಹಜೀವನ ಮಾಡುತ್ತಿರುವಾಗ ನೀನೇಕೆ ಇನ್ನೊಬ್ಬರ ಸಂಗವನ್ನು ಬಯಸುತ್ತಿರುವೆ?’ ಎಂದು ಆಕೆ ಅವನನ್ನು ದಬಾಯಿಸಿದಳು. ಸತೀಶ್ ಅವಳಿಗೆ ಹಾರಿಕೆಯ ಉತ್ತರವನ್ನು ಕೊಟ್ಟ. ಆದರೆ, ಗುಟ್ಟಾಗಿ ಲೀನಾಳನ್ನು ಬೇರೆ ಬೇರೆ ಜಾಗಗಳಲ್ಲಿ ಸಂಧಿಸತೊಡಗಿದ.
ಏತನ್ಮಧ್ಯೆ ಒಂದು ದಿನ ಸತೀಶ್ ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋದ. ಆ ಸಮಯಕ್ಕೆ ಕೋಣೆಯಲ್ಲಿ ಏನನ್ನೋ ಹುಡುಕಲು ಮೀರಾ ಹೊರಟಾಗ ಅವಳಿಗೆ ಸತೀಶನ ಹಳೆಯ ಕಾಗದ ಪತ್ರಗಳಿದ್ದ ಒಂದು ಕಡತ ಸಿಕ್ಕಿತು. ಅದೇನೆಂದು ಕುತೂಹಲದಿಂದ ಆಕೆ ನೋಡಿದಳು. ಅದು ಸತೀಶನ ಮೊದಲ ವಿವಾಹದ ವಿಚ್ಛೇಧನಕ್ಕೆ ಸಂಬಂಧಿಸಿದ ಫೈಲ್ ಆಗಿತ್ತು. ತನ್ನ ನೋಟೀಸಿನಲ್ಲಿ ಸತೀಶನ ಪತ್ನಿ ಆತ ತನ್ನ ಒಡವೆಗಳನ್ನು ಕದ್ದು ಅಡವಿಟ್ಟ ಕಾರಣ ತನಗೆ ಅವನ ಮೇಲೆ ವಿಶ್ವಾಸ ಹೋಗಿದೆ ಎನ್ನುವ ಕಾರಣಕ್ಕಾಗಿ ವಿಚ್ಛೇಧನವನ್ನು ಬಯಸಿದ್ದಳು. ಈ ಮಾಹಿತಿಯು ದೊರೆತ ಕೂಡಲೇ ಮೀರಾ ಅದನ್ನು ತಾನು ಉಪಯೋಗಿಸಿ ಆ ಮೂಲಕ ಸತೀಶ್ ತನ್ನಿಂದ ದೂರಹೋಗದಂತೆ ತಡೆಯಬೇಕೆಂದು ತೀರ್ವನಿಸಿದಳು. ಸತೀಶ್ ಊರಿನಿಂದ ವಾಪಸಾದ ಕೂಡಲೇ ನಿನ್ನ ಮೊದಲ ಪತ್ನಿಯ ಅಡವಿಟ್ಟ ಆಭರಣಗಳು ಏನಾದವು? ಅವನ್ನು ಬಿಡಿಸಿಕೊಂಡು ಬರಲಿಲ್ಲವೇ? ಎಂದು ಕೇಳಿದಳು. ಈ ಪ್ರಶ್ನೆಯಿಂದ ಗಾಬರಿಗೊಂಡ ಸತೀಶ್ ಅವಳಿಗೆ ಯಾವುದೇ ಉತ್ತರ ನೀಡಲಿಲ್ಲ.
ಮೀರಾಳಿಗೆ ತನ್ನ ಗುಟ್ಟು ತಿಳಿದಿರುವುದರಿಂದ ಅವಳೊಡನೆ ಸಹಜೀವನ ಮುಂದುವರಿಸಿದರೆ ತನ್ನ ಜೀವನವು ದುಸ್ತರವಾಗಬಹುದೆಂದು ಭಾವಿಸಿದ ಸತೀಶ್, ಮಾರನೆಯ ದಿನ ಎದ್ದ ಕೂಡಲೇ ಮೀರಾಳನ್ನುದ್ದೇಶಿಸಿ, ‘ನಮ್ಮಿಬ್ಬರ ಕರಾರಿನಂತೆ ನಾವಿಬ್ಬರೂ ಪರಸ್ಪರ ಹೊಂದಿಕೊಳ್ಳದೆ ಹೋದರೆ ಸಹಜೀವನವನ್ನು ಮುಕ್ತಾಯಗೊಳಿಸಿ ನಮ್ಮ ನಮ್ಮ ದಾರಿಗೆ ಹೋಗಬಹುದು. ನಾವಿಬ್ಬರೂ ಒಬ್ಬರಿಗೊಬ್ಬರು ಕಂಪಾಟಿಬಲ್ ಆಗಿಲ್ಲ. ಹೀಗಾಗಿ ನೀನು ನನ್ನ ಮನೆಯನ್ನು ಬಿಟ್ಟು ಬೇರೆಡೆ ಹೋಗು, ನಾನು ಒಬ್ಬನೇ ಇರಲು ಬಯಸುತ್ತೇನೆ’ ಎಂದ. ಆದರೆ ಮೀರಾ ಅವನ ಮಾತುಗಳಿಗೆ ಸಮ್ಮತಿಸಲಿಲ್ಲ. ‘ನೀನು ಕಚೇರಿಯಲ್ಲಿ ಇನ್ನೊಬ್ಬಳನ್ನು ಪ್ರೀತಿಸಿರುವ ಫಲವಾಗಿಯೇ ಹೀಗೆ ಮಾತನಾಡುತ್ತಿರುವೆ ಎಂದು ನನಗೆ ತಿಳಿದಿದೆ.
ನಾನು ನಿನ್ನ ಗುಟ್ಟನ್ನು ಲೀನಾಳಿಗೆ ರಟ್ಟು ಮಾಡುವೆ, ಎಲ್ಲೆಡೆಯಲ್ಲಿಯೂ ನೀನು ಮೋಸಗಾರನೆಂದು ಜಾಹೀರು ಮಾಡುವೆ’ ಎಂದು ಅವನಿಗೆ ಬೆದರಿಸಿದಳು. ತಾನು ಅವನ ಮನೆಯನ್ನು ಏನು ಮಾಡಿದರೂ ಬಿಡುವುದಿಲ್ಲವೆಂದು ಹಠವನ್ನು ಹಿಡಿದಳು. ಅವರಿಬ್ಬರ ಮಧ್ಯೆ ಇದೇ ಕಾರಣಕ್ಕೆ ಪ್ರತಿದಿನವೂ ಜಗಳವಾಗತೊಡಗಿತು.
ಒಂದು ರಾತ್ರಿ ಅವರಿಬ್ಬರ ಜಗಳವು ವಿಕೋಪಕ್ಕೆ ಹೋಯಿತು. ಕೋಪದ ಭರದಲ್ಲಿ ಸತೀಶ್ ಮೀರಾಳ ಕತ್ತನ್ನು ಎಷ್ಟು ಜೋರಾಗಿ ಹಿಸುಕಿದನೆಂದರೆ ಮೀರಾ ಸ್ಥಳದಲ್ಲಿಯೇ ಕುಸಿದು ಸತ್ತುಬಿದ್ದಳು. ಮುಂದೇನು ಮಾಡುವುದು ಎಂದೇ ತೋಚದಾದಾಗ ಅವಳ ಮೃತದೇಹವನ್ನು ಸತೀಶ್ ರೂಮಿನಲ್ಲಿಯೇ ಇಟ್ಟ. ಇಡೀ ರಾತ್ರಿ ಅವಳ ಶವದ ವಿಲೇವಾರಿಯ ಬಗ್ಗೆ ಯೋಚಿಸತೊಡಗಿದ. ಆಗ ಅವನಿಗೆ ವೃತ್ತಪತ್ರಿಕೆಯಲ್ಲಿ ಓದಿದ್ದ ಒಂದು ಪ್ರಕರಣ ನೆನಪಾಯಿತು. ಒಬ್ಬ ವ್ಯಕ್ತಿ ತನ್ನ ಪ್ರೇಯಸಿಯ ದೇಹವನ್ನು ಕತ್ತರಿಸಿ ತುಂಡು ಮಾಡಿ ಆ ತುಂಡುಗಳನ್ನು ಹಲವಾರು ಜಾಗಗಳಲ್ಲಿ ಎಸೆದಿದ್ದು ನೆನಪಿಗೆ ಬಂದಿತು. ತಾನೂ ಹಾಗೆಯೇ ಮಾಡಬೇಕೆಂದು ಸತೀಶ್ ತೀರ್ವನಿಸಿದ. ಮಾರನೆಯ ದಿನ ಆತ ಎಂದಿನಂತೆ ಕಚೇರಿಗೆ ಹೋದ. ಮೀರಾ ಎಲ್ಲಿ ಎಂದು ಸಹೋದ್ಯೋಗಿಗಳು ವಿಚಾರಿಸಿದಾಗ ಆಕೆಯ ತಾಯಿ ಸೀರಿಯಸ್ ಆಗಿರುವ ಕಾರಣ ತನ್ನ ಊರಿಗೆ ಹೊರಟುಹೋದಳೆಂದು ತಿಳಿಸಿದ. ಆ ಸಂಜೆ ಮಾರುಕಟ್ಟೆಗೆ ಹೋಗಿ ಒಂದು ಎಲೆಕ್ಟ್ರಿಕ್ ಗರಗಸವನ್ನು ಕೊಂಡು ತಂದ. ಅದರ ಮೂಲಕ ಮೀರಾಳ ಶವವನ್ನು ಕತ್ತರಿಸಬೇಕೆಂದು ಆತ ತೀರ್ವನಿಸಿದ್ದ. ಆದರೆ, ತಾನು ಅಪಾರ್ಟ್ವೆುಂಟ್ನಲ್ಲಿ ಗರಗಸವನ್ನು ಉಪಯೋಗಿಸಿದಾಗ ಅದರ ಶಬ್ದದಿಂದ ಅಕ್ಕಪಕ್ಕದವರು ಸಂಶಯಗೊಳ್ಳುವರೆಂದು ಯೋಚಿಸಿ ಕೆಲವು ಪ್ಲೈವುಡ್ ಶೀಟುಗಳನ್ನೂ ಖರೀದಿಸಿಕೊಂಡು ಬಂದ. ಮಾರನೆಯ ದಿನ ಆಫೀಸಿಗೆ ರಜೆ ಹಾಕಿ ಮೀರಾಳ ಶವವನ್ನು 32 ತುಂಡುಗಳಾಗಿ ಕತ್ತರಿಸಿದ.
ಅಷ್ಟರಲ್ಲಿ ಶವ ಕೊಳೆಯುವ ಹಂತಕ್ಕೆ ಬಂದಿದ್ದರಿಂದ ಮನೆಯಲ್ಲಿ ಕೆಟ್ಟ ವಾಸನೆ ಬರತೊಡಗಿತ್ತು. ಹೀಗಾಗಿ, ಆತ ಇಡೀ ಮನೆಗೆ ಡಿಯೋಡರೆಂಟ್ ಸಿಂಪಡಿಸಿದ. ಶವದ ತುಂಡುಗಳು ಇನ್ನಷ್ಟು ಕೊಳೆಯದಿರಲಿ ಎಂದು ಅವನ್ನು ತನ್ನ ರೆಫ್ರಿಜಿರೇಟರಿನಲ್ಲಿಟ್ಟ. ಇಷ್ಟೆಲ್ಲಾ ಮುಂಜಾಗರೂಕತೆ ತೆಗೆದುಕೊಂಡರೂ ಮನೆಗೆ ಪಸರಿಸಿದ್ದ ಕೆಟ್ಟ ವಾಸನೆ ಹೋಗಲಿಲ್ಲ. ಆಗ ಸತೀಶ್ ಶವದ ತುಂಡುಗಳನ್ನು ಬೇಯಿಸಿದರೆ ಅದರ ವಾಸನೆ ಹೋಗುತ್ತದೆ ಎಂದು ರ್ತಸಿ ಒಂದು ದೊಡ್ಡ ಕುಕ್ಕರನ್ನು ಖರೀದಿಸಿ ತಂದ. ಅದರಲ್ಲಿ ಶವದ ತುಂಡುಗಳನ್ನು ಇಡೀ ರಾತ್ರಿ ಬೇಯಿಸಿದ. ಎಲ್ಲ ತುಂಡುಗಳನ್ನೂ ಬೇಯಿಸಲು ಅವನಿಗೆ ಸಾಧ್ಯವಾಗಲಿಲ್ಲ. ಬೇಯಿಸದೇ ಉಳಿದಿದ್ದ ತುಂಡುಗಳನ್ನು ಮತ್ತೆ ಫ್ರಿಜ್ನಲ್ಲಿಟ್ಟು ಬೆಂದ ತುಂಡುಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ತನ್ನ ಅಪಾರ್ಟ್ವೆುಂಟ್ ಹೊರಗಿದ್ದ ರ್ಪಾನ ಬಳಿ ಹೋಗಿ ಅವನ್ನು ಬೀದಿ
ನಾಯಿಗಳಿಗೆ ಆಹಾರವಾಗಿ ಹಾಕಿದ. ರ್ಪಾಗೆ ಬರುತ್ತಿದ್ದ ಹಲವಾರು ಜನರು ಈ ದೃಶ್ಯವನ್ನು ಕಂಡರೂ ಅವರು ಯಾವುದೇ ಶಂಕೆಯನ್ನು ವ್ಯಕ್ತಪಡಿಸಲಿಲ್ಲ.
ಬೇಯದೇ ಉಳಿದಿದ್ದ ಮಾಂಸದ ತುಂಡುಗಳನ್ನು ಮಾರನೆಯ ದಿನ ಬೇಯಿಸಲು ಸತೀಶ್ನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಅವನ ಮನೆಯಿಂದ ಬರುತ್ತಿದ್ದ ಕೆಟ್ಟ ವಾಸನೆ ತಾಳಲಾರದಂತಾಯಿತು. ಅವನ ನರೆಮನೆಯವರು ಪೊಲೀಸರಿಗೆ ದೂರು ಕೊಟ್ಟರು. ಪೊಲೀಸರು ಬಂದಾಗ ಸತೀಶ್ ಮನೆಯಲ್ಲಿಯೇ ಇದ್ದ. ಮನೆಯಿಂದ ಕೆಟ್ಟ ವಾಸನೆ ಬರುತಿರುವ ಕಾರಣವನ್ನು ಕೇಳಿದಾಗ ಪೊಲೀಸರಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ. ಆಗ ಅವನನ್ನು ಹಿಡಿದು ವಿಚಾರಣೆ ಮಾಡಿದಾಗ ನಡೆದ ಕೃತ್ಯ ಬೆಳಕಿಗೆ ಬಂತು.
ಅವನ ಪ್ಲಾಟ್ನ ಮಂಚವೊಂದರ ಕೆಳಗೆ ಕತ್ತರಿಸಲಾಗಿದ್ದ ಒಂದು ಇಡೀ ಕಾಲು ಕಂಡುಬಂದಿತು. ಅವನ ಫ್ರಿಜ್ನಲ್ಲಿ ದೇಹದ ಇತರ ಕೆಲವು ಭಾಗಗಳು ದೊರೆತವು. ಒಂದು ಮೂಲೆಯಲ್ಲಿ ರಕ್ತಸಿಕ್ತ ಎಲೆಕ್ಟ್ರಿಕ್ ಗರಗಸವು ಸಿಕ್ಕಿತು. ಅವನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನಡೆದ ವಿಷಯವನ್ನು ಚಾಚೂತಪ್ಪದೆ ಹೇಳಿದ. ಮೀರಾಳ ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಸತೀಶನನ್ನು ಬಂಧಿಸಲಾಯಿತು. ತಾನು ಇಂಗ್ಲೀಷ್ ಚಿತ್ರವೊಂದನ್ನು ನೋಡಿ
ಈ ರೀತಿ ಮಾಡಲು ಪ್ರೇರಿತನಾದೆ ಎಂದಾತ ಪೊಲೀಸರಿಗೆ ಹೇಳಿದ.
ಪೊಲೀಸರ ಮುಂದಿದ್ದ ಸವಾಲೆಂದರೆ ಮೀರಾಳನ್ನು ಸತೀಶನೇ ಕೊಲೆ ಮಾಡಿ ಅವಳ ದೇಹವನ್ನು ಕತ್ತರಿಸಿ ಆ ತುಂಡುಗಳನ್ನು ಎಸೆದ ಎಂದು ಸಾಬೀತು ಮಾಡುವುದು. ಮನೆಯಲ್ಲಿ ಸಿಕ್ಕ ಕಾಲು ಮೃತಳದ್ದೇ ಎಂದು ಸಾಬೀತು ಮಾಡಲು ಪೊಲೀಸರು ಡಿ.ಎನ್.ಎ ತಂತ್ರಜ್ಞಾನದ ಮೊರೆಹೋದರು. ಈ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿದ್ದ ಮೀರಾಳ ತಾಯಿಯ ಮನೆಗೆ ಹೋದರು. ಆಕೆ ವಾರಕ್ಕೊಮ್ಮೆ ಮೀರಾ ತನಗೆ ಫೋನ್ ಮಾಡುತ್ತಿದ್ದು ಕಳೆದ ಎರಡು ವಾರಗಳಿಂದ ಅವಳ ಫೋನ್ ಬಂದಿಲ್ಲ ಎಂದರು. ಅವರ ರಕ್ತದ ಸ್ಯಾಂಪಲ್ ಪಡೆದ ಪೊಲೀಸರು ಅದನ್ನು ಮೃತಳ ಕಾಲಿನ ಡಿ.ಎನ್.ಎ ಸ್ಯಾಂಪಲ್ಲಿನೊಂದಿಗೆ ಹೋಲಿಕೆ ಮಾಡಿಸಿದರು. ಲ್ಯಾಬೊರೇಟರಿ ಪರೀಕ್ಷೆಯಲ್ಲಿ ಮೃತಳು ಮೀರಾ ಎಂದು ಸಾಬೀತಾಯಿತು. ಮೃತಳ ಫೋನನ್ನು ಸತೀಶ್ ತನ್ನ ಬ್ಯಾಂಕಿನ ಲಾಕರಿನಲ್ಲಿಟ್ಟಿದ್ದ. ಅದನ್ನು ಜಪ್ತು ಮಾಡಲಾಯಿತು. ತನಿಖೆಯನ್ನು ಮುಗಿಸಿ ಸತೀಶನ ಮೇಲೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಯಿಲ್ಲದ ಕಾರಣ ಸಾಂರ್ದಭಿಕ ಸಾಕ್ಷ್ಯಗಳ ಮೂಲಕವೇ ಅಪರಾಧವನ್ನು ಸಾಬೀತುಪಡಿಸಬೇಕಾಗಿದೆ. ಸತೀಶ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅವನಿಗೆ ಮೀರಾಳನ್ನು ಕೊಂದ ಬಗ್ಗೆ ಯಾವ ಪಶ್ಚಾತ್ತಾಪವೂ ಇಲ್ಲ. ದಬ್ಬಾಳಿಕೆ ಮಾಡುವವನ ಕ್ರೌರ್ಯವು ಆತನ ಹೆದರಿಕೆಯ ಪರಿಣಾಮದಿಂದಲೇ ಅಗಿರುತ್ತದೆ ಎಂದ 17ನೆಯ ಶತಮಾನದ ಬ್ರಿಟಿಷ್ ಚರಿತ್ರಕಾರ ಥಾಮಸ್ ಫುಲ್ಲರ್. ಒಂದು ವೇಳೆ ಸತೀಶನಿಗೆ ಅವನ ಗುಟ್ಟು ರಟ್ಟುಮಾಡುವ ಹೆದರಿಕೆಯನ್ನು ಹುಟ್ಟಿಸದೆ ಅವನಿಂದ ಮೀರಾ ದೂರವಾಗಿದ್ದರೆ ಅವಳ ಜೀವ ಉಳಿಯುತ್ತಿತ್ತೇನೋ?
ವಿಶೇಷ ಸ್ಟೋರಿ……